ಕೊರೊನಾ ವೈರಸ್ ದಿನದಿಂದ ದಿನಕ್ಕೆ ಭಯಾನಕ ರೂಪ ತಾಳ್ತಾ ಇದೆ. ಕೊರೊನಾದಿಂದ ರಕ್ಷಣೆ ಸಿಕ್ಕಿದ್ರೆ ಸಾಕು ಅಂತ ಜನರು ಮಾಸ್ಕ್, ಗ್ಲೌಸ್ ಹಾಗೂ ಬೇರೆ ಬೇರೆ ಸಾಧನಗಳನ್ನ ಬಳಸ್ತಾನೇ ಇದ್ದಾರೆ. ಜೊತೆಗೆ ಕೆಲವೊಂದು ವಸ್ತುಗಳನ್ನು ಮುಟ್ಟಲು ಭಯ ಪಡ್ತಿದ್ದಾರೆ.
ಅದ್ರಲ್ಲಿ ಬಾಗಿಲು, ಹ್ಯಾಂಡಲ್ ಹಾಗೂ ಲಿಫ್ಟ್‌ನ ಬಟನ್ ಮುಖ್ಯವಾದದ್ದು. ಇದನ್ನು ಅನೇಕರು ಮುಟ್ಟಿರುತ್ತಾರೆ. ಅವ್ರಿಂದ ನಮಗೆ ಕೊರೊನಾ ಬಂದ್ರೆ ಎಂಬ ಭಯದಲ್ಲಿರುತ್ತಾರೆ ಜನ. ಆದರೆ ಈಗ ಅಮೆರಿಕಾದ ಕ್ಯಾಲಿಫೋರ್ನಿಯಾ ಯುನಿವರ್ಸಿಟಿ ನೆಮ್ಮದಿಯ ಸುದ್ದಿ ನೀಡಿದೆ.
ಸಂಶೋಧನೆ ಪ್ರಕಾರ ಈ ರೀತಿ ಕೊರೊನಾ ಈಗ ಹರಡುವುದಿಲ್ಲವಂತೆ. ಬಾಗಿಲು, ಬಾಗಿಲ ಹಿಡಿಕೆ, ಲಿಫ್ಟ್ ಬಟನ್ ಮೂಲಕ ಕೊರೊನಾ ಹರಡುವ ಹಂತ ದಾಟಿದ್ದಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಹಾಗಂತ ಮಾಸ್ಕ್ ಧರಿಸದೇ ಇರೋದು, ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಇರೋದು ಜೊತೆಗೆ ಪದೇ ಪದೇ ಮುಖ, ಮೂಗು ಮುಟ್ಟಿಕೊಳ್ಳೊದು ಮಾಡಬೇಡಿ. ಇದು ಅಪಾಯವನ್ನ ಆಮಂತ್ರಿಸಿದಂತೆ.