ಸಾಮಾಜಿಕ ಜಾಲತಾಣದಲ್ಲಿ ಕುರೂಪಿ ಎಂದು ಜರಿದವರಿಗೆ ದಿಟ್ಟ ಉತ್ತರ ಕೊಟ್ಟಿರುವ ಮಹಿಳೆ, ಜಾಲತಾಣದಲ್ಲಿ ದಿನಕ್ಕೊಂದು ಫೋಟೋ ಅಪ್ ಲೋಡ್ ಮಾಡುವ ಮೂಲಕ ಟ್ರೋಲ್ ಗೇಟ್ ಬಂದ್ ಮಾಡಿದ್ದಾರೆ.
ಹುಟ್ಟಿನಿಂದ ಫ್ರೀಮ್ಯಾನ್ ಶೆಲ್ಡಮ್ ಸಿಂಡ್ರೋಮ್ ನಿಂದ ಬಳಲುತ್ತಿರುವ ಮಲಿಸ್ಸಾ ಬ್ಲೇಕ್ ಎಂಬಾಕೆಯ ಬಗ್ಗೆ ಯೂಟ್ಯೂಬ್ ಚಾನಲ್ ಒಂದರಲ್ಲಿ ಸಣ್ಣ ವಿಡಿಯೋ ಹರಿದಾಡಿತ್ತು. ಇದನ್ನಿಟ್ಟುಕೊಂಡು ಟ್ರೋಲ್ ಮಾಡಿದ್ದ ಅನೇಕರು, ಆಕೆಯನ್ನು ಆಡಿಕೊಂಡಿದ್ದರು.
ಇಂತಹ ಕುರೂಪಿಗಳೂ ಇರುತ್ತಾರಾ ? ಆಕೆ ಅಸಹ್ಯವಾಗಿ ಇರುವುದರಿಂದಲೇ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್ಲೋಡ್ ಮಾಡುವುದಿಲ್ಲ, ತನಗೆ ತಾನೇ ನಿರ್ಬಂಧ ವಿಧಿಸಿಕೊಂಡಿದ್ದಾಳೆ ಎಂಬಿತ್ಯಾದಿ ಚುಚ್ಚುಮಾತುಗಳಿಂದ ನೊಂದಿದ್ದ ಮೆಲಿಸ್ಸಾ ಬ್ಲೇಕ್, ಸಹಿಸುವಷ್ಟು ಸಹಿಸಿಯಾದ ಮೇಲೆ ಟ್ವಿಟ್ಟರ್ ನಲ್ಲಿ 1 ಲಕ್ಷ ಅಭಿಮಾನಿ, ಅನುಯಾಯಿಗಳನ್ನು ಹೊಂದಿದ್ದಾಳೆ.
ಜನರ ಟೀಕೆಗಳಿಗೆ ತಲೆಕೆಡಿಸಿಕೊಳ್ಳದೆ ದಿನಕ್ಕೊಂದರಂತೆ ಫೋಟೋ ಪೋಸ್ಟ್ ಮಾಡುತ್ತಾ ಬಂದ ಬ್ಲೇಕ್, ಇದೀಗ ಒಮ್ಮೆಲೆ ಮೂರು ಸೆಲ್ಫಿ ಪೋಸ್ಟ್ ಮಾಡಿದ್ದು, ನಾನು ಕುರೂಪಿ ಆಗಿರುವುದರಿಂದ ಸಾಮಾಜಿಕ ಜಾಲತಾಣದಲ್ಲಿ ನನ್ನ ಫೋಟೋ ಅಪ್ಲೋಡ್ ಮಾಡಬಾರದು, ನನ್ನ ಫೋಟೋಗಳಿಗೆ ನಿರ್ಬಂಧ ವಿಧಿಸಬೇಕು ಎನ್ನುವರಿಗಾಗಿ ಈ ಪೋಟೋಗಳನ್ನು ಹಾಕುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾಳೆ. ಟ್ರೋಲ್ ಮಾಡುತ್ತಿದ್ದವರ ಗೇಟ್ ಬಂದ್ ಆಗಿದ್ದು, ಅಭಿಮಾನಿಗಳ ಸಂಖ್ಯೆ ಜಾಸ್ತಿ ಆಗಿದೆ.