ಮೈಸೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ಸಿಬಿಐ ದಾಳಿ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ಡಿ.ಕೆ.ಶಿ ಸಿಬಿಐಯನ್ನು ಸಮರ್ಥವಾಗಿ ಎದುರಿಸುತ್ತಾರೆ. ಅವರಿಗೆ ಗೆಲ್ಲುವುದು ಗೊತ್ತು ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್, ಸಿಬಿಐ ದಾಳಿ ಎದುರಿಸುವುದು ಹೇಗೆಂದು ಡಿ.ಕೆ.ಶಿವಕುಮಾರ್ ಗೆ ಗೊತ್ತು. ನಾನು ಹಲವು ವರ್ಷ ಅವರ ಜೊತೆಗಿದ್ದವನು. ಹಾಗಾಗಿ ಹೇಳುತ್ತಿದ್ದೇನೆ. ಡಿ.ಕೆ.ಶಿಗೆ ಇದೆಲ್ಲವನ್ನು ಗೆದ್ದು ಬರುವ ಶಕ್ತಿಯಿದೆ ಎಂದು ತಿಳಿಸಿದ್ದಾರೆ.
ಸಿಬಿಐ ದಾಳಿ ರಾಜಕೀಯ ಪ್ರೇರಿತ ಎಂದು ಹೇಳುವುದು ಸರಿಯಲ್ಲ. ಈ ಸಂದರ್ಭದಲ್ಲಿ ಇದೆಲ್ಲವು ಒಂದು ಸಹಜ ಪ್ರಕ್ರಿಯೆಯಷ್ಟೆ ಎಂದು ವಿಶ್ವನಾಥ್ ಹೇಳಿದ್ದಾರೆ.