ನವದೆಹಲಿ: ಉತ್ತರ ಪ್ರದೇಶದ ಹತ್ರಾಸ್ ಅತ್ಯಾಚಾರ ಪ್ರಕರಣದ ಸಂತ್ರಸ್ಥೆಯ ಕುಟುಂಬಸ್ಥರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಭೇಟಿಯಾಗಿದ್ದಾರೆ. ಇಬ್ಬರ ಭೇಟಿ ನೆಟ್ಟಿಗರಿಂದ ಪ್ರಶಂಸೆಗೆ ಕಾರಣವಾಗಿದೆ.
ಈ ಘಟನೆಯ ನಂತರ ಪ್ರಿಯಾಂಕಾ ಪತಿ ರಾಬರ್ಟ್ ವಾದ್ರಾ ತಮ್ಮ ಪತ್ನಿಯ ಪರ ಟ್ವೀಟ್ ಮಾಡಿದ್ದಾರೆ. “ಪ್ರಿಯಾಂಕಾ ನನಗೆ ನಿನ್ನ ಬಗ್ಗೆ ಹೆಮ್ಮೆ ಇದೆ. ದೇಶದಲ್ಲಿ ತೊಂದರೆಗೀಡಾದ ಜನರಿಗೆ ನ್ಯಾಯ ಕೊಡಿಸಲು ಇದೊಂದೇ ಮಾರ್ಗವಾಗಿದೆ. ನಾನು ಹಾಗೂ ಇಡೀ ಕುಟುಂಬ ನೀನು ಹಾಗೂ ದೇಶದ ಜನರ ಬಗ್ಗೆ ಆತಂಕಿತರಾಗಿದ್ದೇವೆ. ಆದರೆ, ನಾವು ಬಡ ಜನರ ಮೇಲಾಗುತ್ತಿರುವ ದೌರ್ಜನ್ಯವನ್ನು ತಡೆಯಲು ಮುಂದಡಿ ಇಡಲೇ ಬೇಕು. ಹೋರಾಟ ಮುಂದುವರಿಸು” ಎಂದು ಬರೆದಿದ್ದಾರೆ.
ವಾದ್ರಾ ಟ್ವೀಟ್ ಗೆ ಸಾಕಷ್ಟು ಬೆಂಬಲ ವ್ಯಕ್ತವಾಗಿದೆ. ಪ್ರಿಯಾಂಕಾ ಅವರಿಗೆ ಒಂದು ಸಲಾಂ, ಮಗಳನ್ನು ಕಳೆದುಕೊಂಡ ಕುಟುಂಬದ ದುಃಖ ಹಂಚಿಕೊಂಡು ಪ್ರಿಯಾಂಕಾ ಮಾನವೀಯತೆ ತೋರಿದ್ದಾರೆ. ಅವರೊಬ್ಬರೇ ಈಗ ಕಾಂಗ್ರೆಸ್ ಗೆ ಉಳಿದಿರುವ ಭರವಸೆ ಎಂಬ ಕಮೆಂಟ್ ಗಳು ಬಂದಿವೆ.
https://twitter.com/Pipalkoti/status/1312687479850295296?ref_src=twsrc%5Etfw%7Ctwcamp%5Etweetembed%7Ctwterm%5E1312687479850295296%7Ctwgr%5Eshare_3&ref_url=https%3A%2F%2Fwww.news18.com%2Fnews%2Fbuzz%2Fonly-way-to-get-justice-robert-vadra-tweets-in-support-of-priyanka-after-she-visits-hathras-2932643.html