alex Certify ಕೊರೊನಾ ಇದ್ರೂ ಡೊನಾಲ್ಡ್ ಟ್ರಂಪ್ ಚುನಾವಣೆ ಪ್ರಚಾರ: ಆರೋಗ್ಯವಾಗಿದ್ದೇನೆ ಎಂದು ತೋರಿಸಿಕೊಳ್ಳಲು ಕಾರ್ ನಲ್ಲೇ ರೋಡ್ ಶೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಇದ್ರೂ ಡೊನಾಲ್ಡ್ ಟ್ರಂಪ್ ಚುನಾವಣೆ ಪ್ರಚಾರ: ಆರೋಗ್ಯವಾಗಿದ್ದೇನೆ ಎಂದು ತೋರಿಸಿಕೊಳ್ಳಲು ಕಾರ್ ನಲ್ಲೇ ರೋಡ್ ಶೋ

ವಾಷಿಂಗ್ಟನ್: ಕೊರೋನಾ ಪಾಸಿಟಿವ್ ಇದ್ದರೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರೋಡ್ ಶೋ ನಡೆಸಿದ್ದಾರೆ. ಕಾರ್ ನಲ್ಲಿ ಅವರು ರೋಡ್ ಶೋ ನಡೆಸಿದ್ದು, ಅಪಾರ ಸಂಖ್ಯೆಯ ಬೆಂಬಲಿಗರು ಭಾಗಿಯಾಗಿದ್ದಾರೆ.

ವಾಲ್ಟರ್ ರೀಡ್ ಆಸ್ಪತ್ರೆಯ ಎದುರು ಡೊನಾಲ್ಡ್ ಟ್ರಂಪ್ ಕಾರಿನಲ್ಲಿ ಕುಳಿತುಕೊಂಡು ರೋಡ್ ಶೋ ನಡೆಸಿದ್ದು ಬೆಂಬಲಿಗರು ಜಮಾಯಿಸಿದ್ದಾರೆ. ಮುಂದಿನ ತಿಂಗಳು ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು ಪ್ರಚಾರದ ವೇಳೆಯಲ್ಲಿಯೇ ಅವರಿಗೆ ಕೊರೋನಾ ಪಾಸಿಟಿವ್ ಬಂದಿದೆ. ತಮ್ಮ ಆರೋಗ್ಯ ಚೆನ್ನಾಗಿದೆ ಎಂದು ತೋರಿಸಿಕೊಳ್ಳಲು ಟ್ರಂಪ್ ರೋಡ್ ಶೋ ನಡೆಸಿದ್ದಾರೆ. ಈ ವೇಳೆ ಸಾವಿರಾರು ಬೆಂಬಲಿಗರು ಜಮಾವಣೆಗೊಂಡಿದ್ದಾರೆ.

ಅಂದ ಹಾಗೆ ಕೊರೊನಾ ಸೋಂಕು ತಗಲಿರುವ ಟ್ರಂಪ್ ಅವರ ರಕ್ತದ ಆಮ್ಲಜನಕ ಮಟ್ಟ ಕುಸಿಯ ತೊಡಗಿದ್ದು ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಶ್ವೇತಭವನದ ಮೂಲಗಳು ತಿಳಿಸಿವೆ. ಹೀಗಿದ್ದರೂ ಕೂಡ ತಾವು ಆರೋಗ್ಯವಾಗಿ ಇರುವುದನ್ನು ತೋರಿಸಿಕೊಳ್ಳಲು ರೋಡ್ ಶೋ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...