ಭೋಪಾಲ್: ‘ಇಂದಿರಾಗಾಂಧಿಯವರನ್ನು ಹತ್ಯೆ ಮಾಡಲು ಗುಂಡುಗಳು ಇದ್ದವು. ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಲು ಮಾನವ ಬಾಂಬ್ ಬಳಸಲಾಗಿತ್ತು. ಆದರೆ, ಪ್ರಧಾನಿ ಮೋದಿ ಅವರನ್ನು ಕೊಲ್ಲಲು ಯಾಕೆ ಯಾರು ಬಾಂಬ್ ತಯಾರಿಸಲು ಸಾಧ್ಯವಾಗಿಲ್ಲ?’
ಹೀಗೆಂದು ಮಧ್ಯಪ್ರದೇಶದ JGP ಮಾಜಿ ಶಾಸಕ ರಾಮ್ ಗುಲಮ್ ಉಯ್ಕೆ ಪ್ರಶ್ನಿಸಿದ್ದಾರೆ. ಸಿಯೋನಿ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಅವರು, ಕೊರೋನಾ ಸಾಂಕ್ರಾಮಿಕ ರೋಗದ ಕುರಿತು ಪ್ರಸ್ತಾಪಿಸಿ ಪ್ರಧಾನಿ ಮೋದಿ ಅವರನ್ನು ಟೀಕಿಸಿದ್ದಾರೆ.
ಕೇಂದ್ರ ಸರ್ಕಾರ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ವಿಫಲವಾಗಿವೆ. ದೇಶದ ಜನರನ್ನು ಮೋದಿ ಮರಳು ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಇಂದಿರಾ ಹತ್ಯೆ ಮಾಡಲು ಗುಂಡು ಇದ್ದವು. ರಾಜೀವ್ ಗಾಂಧಿ ಕೊಲ್ಲಲು ಬಾಂಬ್ ರೆಡಿಯಾಗಿತ್ತು. ಆದರೆ, ಮೋದಿಯನ್ನು ಕೊಲ್ಲಲು ಯಾರು ಯಾಕೆ ಬಾಂಬ್ ತಯಾರಿಸಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ. ಅವರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.