ಹತ್ರಾಸ್ ಯುವತಿ ಗ್ಯಾಂಗ್ ರೇಪ್, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ತಿರುವು ಸಿಕ್ಕಿದ್ದು ಯುವತಿ ಮೇಲೆ ಅತ್ಯಾಚಾರ ನಡೆದಿಲ್ಲ ಬದಲಿಗೆ ಹಲ್ಲೆ ನಡೆದಿದೆ ಎಂದು ಹೇಳಲಾಗಿದೆ.
ಯುವತಿಯ ಮರಣೋತ್ತರ ಪರೀಕ್ಷೆ ವರದಿ ಕುರಿತು ವಿವಾದ ಉಂಟಾಗಿದೆ. ಯುವತಿ ಮೇಲೆ ಅತ್ಯಾಚಾರ ನಡೆದಿಲ್ಲ, ಹಲ್ಲೆ ಮಾಡಲಾಗಿದೆ ಎಂದು ಎಫ್ಎಸ್ಎಲ್ ವರದಿ ನೀಡಲಾಗಿದೆ. ಹಲ್ಲೆ ನಂತರ ಆಘಾತಕ್ಕೆ ಒಳಗಾಗಿದ್ದ ಯುವತಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದ್ದು ಎಫ್ಎಸ್ಎಲ್ ವರದಿ ಕುರಿತಾಗಿ ಮತ್ತೊಂದು ವಿವಾದ ಶುರುವಾಗಿದೆ.
11 ದಿನಗಳ ನಂತರ ಸ್ಯಾಂಪಲ್ ಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ರವಾನೆ ಮಾಡಲಾಗಿದೆ. 11 ದಿನದ ಬಳಿಕ ಪಡೆದ ಸ್ಯಾಂಪಲ್ ಗಳಿಂದ ಪ್ರಯೋಜನವಿಲ್ಲ ಎಂದು ವೈದ್ಯಾಧಿಕಾರಿ ಹೇಳಿದ್ದಾರೆ ಎನ್ನಲಾಗಿದೆ.