ಮುಂಬೈ: ಬಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್ ಅವರನ್ನು ವಿಚಾರಣೆ ನಡೆಸಿದ್ದ ಎನ್.ಸಿ.ಬಿ. ಅಧಿಕಾರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ಎನ್.ಸಿ.ಬಿ. ಉಪ ನಿರ್ದೇಶಕ ಕೆ.ಪಿ.ಎಸ್. ಮಲ್ಹೋತ್ರಾ ಅವರಿಗೆ ಕೊರೊನಾ ಪಾಸಿಟೀವ್ ಬಂದಿರುವುದಾಗಿ ವರದಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಇದೀಗ ವಿಚಾರಣೆ ಎದುರಿಸಿದ್ದ ದೀಪಿಕಾ, ಶ್ರದ್ಧಾ, ಸಾರಾ ಸೇರಿದಂತೆ ಹಲವರಿಗೆ ಕೋವಿಡ್ ಭೀತಿ ಶುರುವಾಗಿದೆ.
ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದಲ್ಲಿ ಡ್ರಗ್ಸ್ ಜಾಲದ ನಂಟಿನ ಬಗ್ಗೆ ಸುಳಿವು ಸಿಕ್ಕ ಬೆನ್ನಲ್ಲೇ ಎನ್.ಸಿ.ಬಿ.ಯ 5 ಸದಸ್ಯರ ತಂಡ ದೆಹಲಿಯಿಂದ ಮುಂಬೈಗೆ ತೆರಳಿ ಬಾಲಿವುಡ್ ನ ಹಲವರನ್ನು ಡ್ರಗ್ಸ್ ಪ್ರಕರಣ ಕುರಿತು ವಿಚಾರಣೆ ನಡೆಸಲಾಗಿದೆ. ಈ ಐದು ಸದಸ್ಯರ ತಂಡದಲ್ಲಿ ಕೆಪಿಎಸ್ ಮಲ್ಹೋತ್ರಾ ಕೂಡ ಒಬ್ಬರು.