ನ್ಯೂಯಾರ್ಕ್:ಮಾಸ್ಕ್ ಧರಿಸುವಿಕೆಯಿಂದ ಅಧಿಕ ಕಾರ್ಬನ್ ಡೈಆಕ್ಸೈಡ್ ದೇಹ ಸೇರುವುದು ತಪ್ಪುತ್ತದೆ. ಶ್ವಾಸಕೋಶದ ಸಮಸ್ಯೆ ಇದ್ದವರಿಗೆ ಇನ್ನಷ್ಟು ಅನುಕೂಲವಾಗಲಿದೆ ಎಂದು ಸಂಶೋಧನೆಯೊಂದು ವಿಭಿನ್ನ ಮಾಹಿತಿ ನೀಡಿದೆ.
ಕೋವಿಡ್-19 ಕಾರಣಕ್ಕೆ ಹಲವು ದೇಶಗಳು ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಿವೆ. ಆದರೆ, ಹಲವರು ಅದರಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ ಎಂದು ಕ್ಯಾತೆ ತೆಗೆದಿದ್ದಾರೆ. ಈ ಸಂಬಂಧ ಅಮೆರಿಕಾದ ಮಿಯಾಮಿ ವಿಶ್ವವಿದ್ಯಾಲಯ ಅಧ್ಯಯನವೊಂದನ್ನು ನಡೆಸಿ ವರದಿ ನೀಡಿದೆ.
ಆ್ಯನಲ್ಸ್ ಆಫ್ ಅಮೇರಿಕನ್ ಥೋರೆಸಿಕ್ ಸೊಸೈಟಿ ಎಂಬ ಜರ್ನಲ್ ನಲ್ಲಿ ಸಂಶೋಧನೆಯ ವಿವರ ಪ್ರಕಟಿಸಲಾಗಿದೆ. ಕಾರ್ಬನ್ ಡೈಆಕ್ಸೈಡ್ ಹಾಗೂ ಆಮ್ಲಜನಕ ಮಟ್ಟದಲ್ಲಿ ವ್ಯತ್ಯಾಸ ಉಂಟಾಗುವುದರಿಂದ ಆಗುವ ಪರಿಣಾಮಗಳ ಕುರಿತು ವಿಶ್ಲೇಷಣೆ ಮಾಡಲಾಗಿದೆ.
ಹೀಗಾಗಿ ದೀರ್ಘಕಾಲದಿಂದ ಶ್ವಾಸಕೋಶದ ಪ್ರತಿರೋಧಕ ಕಾಯಿಲೆ (ಸಿಒಪಿಡಿ) ಯಿಂದ ಬಳಲುತ್ತಿದ್ದವರು ಈಗ ಮಾಸ್ಕ್ ಹಾಕುತ್ತಿರುವುದರಿಂದ ಶ್ವಾಸಕೋಶದ ಸಮಸ್ಯೆ ಅವರಿಗೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.