ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನ ಅಯೋಧ್ಯ ನಗರ ಪ್ರದೇಶದಲ್ಲಿ ಎರಡು ದಿನಗಳ ನವಜಾತ ಶಿಶುವಿನ ಶವ ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಬಾಲಕಿಯ ಅಜ್ಜ-ಅಜ್ಜಿಯನ್ನು ವಶಕ್ಕೆ ಪಡೆಯಲಾಗಿದೆ. ಮಗಳಿಗೆ ಹುಟ್ಟಿದ ಮಗುವನ್ನು ಪಾಲಕರು ಹತ್ಯೆಗೈದಿದ್ದಾರೆ.
ಮಾಹಿತಿ ಪ್ರಕಾರ, ಮಗಳು ಊರಿನ ಯುವಕನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳಂತೆ. ಎರಡು ದಿನಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದಾಳೆ. ಮಗಳ ಅಕ್ರಮ ಸಂಬಂಧ ಹೊರಬಂದ್ರೆ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ಪಾಲಕರು ಮಗುವಿನ ಹತ್ಯೆ ಮಾಡಿದ್ದಾರೆ.
ಮೊದಲು ಮಗುವಿಗೆ ಚಾಕುವಿನಿಂದ ಇರಿದಿದ್ದಾರೆ. ನಂತ್ರ ಬ್ಲೇಡ್ ನಿಂದ ದಾಳಿ ನಡೆಸಿದ್ದಾರೆ. ಮಗು ಸಾಯುತ್ತಿದ್ದಂತೆ ಅದನ್ನು ಪೊದೆ ಬಳಿ ಎಸೆದು ಹೋಗಿದ್ದಾರೆ. ಪೊದೆ ಬಳಿ ಎರಡು ದಿನಗಳ ಹಿಂದೆ ಮಗುವಿನ ಶವ ಸಿಕ್ಕಿತ್ತು. ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಸಿಸಿ ಟಿವಿ ಕ್ಯಾಮರಾ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ.