alex Certify ಬ್ಯಾಸ್ಕೆಟ್‌ ಬಾಲ್ ಡ್ರಿಬ್ಲಿಂಗ್ ಮಾಡಿಕೊಂಡು ಆರು ನಿಮಿಷದಲ್ಲಿ ಮೈಲಿ ದೂರ ಓಡಿದ ಅಥ್ಲೀಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ಯಾಸ್ಕೆಟ್‌ ಬಾಲ್ ಡ್ರಿಬ್ಲಿಂಗ್ ಮಾಡಿಕೊಂಡು ಆರು ನಿಮಿಷದಲ್ಲಿ ಮೈಲಿ ದೂರ ಓಡಿದ ಅಥ್ಲೀಟ್

ಬ್ಯಾಸ್ಕೆಟ್ ‌ಬಾಲನ್ನು ಡ್ರಿಬ್ಲಿಂಗ್ ಮಾಡಿಕೊಂಡು ಒಂದು ಮೈಲಿ ದೂರ ಓಡಿದ ದುಬೈ‌ನ ಅಥ್ಲೀಟ್‌ ಅಝ್ಮತ್‌ ಖಾನ್‌ ನೂತನ ಗಿನ್ನೆಸ್ ದಾಖಲೆ ಸೃಷ್ಟಿಸಿದ್ದಾರೆ. ಅವರು ಈ ಸಾಧನೆಯನ್ನು ಕೇವಲ ಆರು ನಿಮಿಷಗಳಲ್ಲಿ ಮಾಡಿ ಮುಗಿಸಿದ್ದಾರೆ.

ಖಾನ್ ‌ರ ಮುಂದೆ ಹೋಗುತ್ತಿದ್ದ ಇಬ್ಬರು ಸೈಕ್ಲಿಸ್ಟ್‌ಗಳು ತಮ್ಮ ಮೊಬೈಲ್‌ ಫೋನ್‌ ನಲ್ಲಿ ಅವರ ಓಟದ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ.

ಪಾಕಿಸ್ತಾನ ಮೂಲದ ಖಾನ್, 3-42 ಕಿಮೀ ಅಂತರದ ದೂರಗಾಮಿ ಓಟದಲ್ಲಿ ಭಾಗಿಯಾಗಿ ಯುಎಇ ಉದ್ದಗಲದಲ್ಲಿ ಫೇಮಸ್ ಆಗಿದ್ದಾರೆ. ಅವರಿಗೆ ದಾಖಲೆ ಸೃಷ್ಟಿಸುವುದು ಹವ್ಯಾಸವಾಗಿದೆ.

ಮಾರ್ಚ್ 2019ರಲ್ಲಿ 44 ನಿಮಿಷ 19 ಸೆಕೆಂಡ್‌ಗಳಲ್ಲಿ 10 ಕಿಮೀ ಮ್ಯಾರಾಥಾನ್ ಓಡಿದ್ದ ಖಾನ್ ಅದೊಂದು ದಾಖಲೆಯನ್ನೂ ನಿರ್ಮಿಸಿದ್ದರು.

https://www.instagram.com/p/CFrelfCnC9L/?utm_source=ig_web_copy_link

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...