ಡೇಟಿಂಗ್ ತಂತ್ರಾಂಶಗಳಲ್ಲಿ ಎಷ್ಟೇ ಜಾಲಾಡಿದರೂ ಸಹ ಸಂಗಾತಿಯನ್ನು ಪತ್ತೆ ಮಾಡಲು ವಿಫಲನಾದ 30 ವರ್ಷದ ವ್ಯಕ್ತಿಯೊಬ್ಬರು ಫೇಸ್ಬುಕ್ನಲ್ಲಿ ತಮ್ಮನ್ನು ತಾವು ಸೇಲ್ಗೆ ಇಟ್ಟುಕೊಂಡಿದ್ದಾರೆ.
ಪ್ರೇಮ ಪಕ್ಷಿಯ ಹುಡುಕಾಟ ಆರಂಭಿಸಿದ ಹತ್ತು ವರ್ಷಗಳ ಬಳಿಕವೂ ತಾವಿನ್ನೂ ಸಿಂಗಲ್ ಆಗಿರುವುದಾಗಿ ಹೇಳಿಕೊಂಡಿರುವ ಅಲನ್ ಕ್ಲೇಟನ್, ತಾವು ಒಳ್ಳೆಯ ಕಂಡೀಷನ್ನಲ್ಲಿ ಇದ್ದು, ಉಚಿತವಾಗಿ ಲಭ್ಯವಾಗುವುದಾಗಿ ಹೇಳಿಕೊಂಡಿದ್ದಾರೆ. ಹೀಗೆ ಮಾಡಿದ ಕೂಡಲೇ ಅಲನ್ ಇನ್ಬಾಕ್ಸ್ಗೆ ಮೆಸೇಜ್ಗಳ ಸುರಿಮಳೆಯೇ ಹರಿದುಬಂದಿದ್ದು, ಕೆಲವರು ಆತನಿಗೆ ಗುಡ್ ಲಕ್ ತಿಳಿಸಿದ್ದಾರೆ.
“ಹಲೋ ಲೇಡೀಸ್. ನಾನು ಅಲನ್. ನನಗೀಗ 30 ವರ್ಷ ವಯಸ್ಸಾಗಿದೆ. ಮಾತಾಡಲು ಒಬ್ಬ ಸುಂದರ ಯುವತಿಗಾಗಿ ಹುಡುಕಾಟ ನಡೆಸುತ್ತಿದ್ದೇನೆ. ಬಹಳಷ್ಟು ಮದುವೆಗಳಿಗೆ ಹೋಗಬೇಕಿರುವ ನಾನು ಒಬ್ಬನೇ ಹೋಗಲು ಆಗುತ್ತಿಲ್ಲ. ಡೇಟಿಂಗ್ ಸೈಟ್ಗಳನ್ನೆಲ್ಲಾ ನೋಡಿದ ನನಗೆ ಅಲ್ಲಿ ಅದೃಷ್ಟಿ ಖುಲಾಯಿಸದ ಕಾರಣ ಹೀಗೆ ಮಾಡಲು ಮುಂದಾಗಿದ್ದೇನೆ” ಎಂದು ಅಲನ್ರ ಸ್ವಯಂ ಜಾಹೀರಾತು ತಿಳಿಸುತ್ತಿದೆ.