ಕೊರೊನಾದಿಂದಾಗಿ 5 ತಿಂಗಳಿಗೂ ಅಧಿಕ ಕಾಲದಿಂದ ಥಿಯೇಟರ್ ಗಳು ಬಂದಾಗಿದ್ದವು. ಅನ್ಲಾಕ್ ಪ್ರಕ್ರಿಯೆಯಲ್ಲಿ ಉದ್ಯಮಗಳು ಸೇರಿದಂತೆ ಮುಚ್ಚಲ್ಪಟ್ಟಿದ್ದ ವಿಭಾಗಗಳನ್ನು ತೆರೆಯೋದಿಕ್ಕೆ ಅವಕಾಶ ನೀಡಿದ ಸರ್ಕಾರ ಥಿಯೇಟರ್ಗಳನ್ನು ಓಪನ್ ಮಾಡುವುದಕ್ಕೆ ಅನುಮತಿ ನೀಡಲು ಕೊಂಚ ತಡಮಾಡಿತು. ಆದರೆ ಇದೀಗ ಅನ್ಲಾಕ್ 5.0 ನಲ್ಲಿ ಥಿಯೇಟರ್ಗಳನ್ನು ತೆರೆಯೋದಿಕ್ಕೆ ಅವಕಾಶ ನೀಡಲಾಗಿದೆ.
ಅಕ್ಟೊಬರ್ 15 ರಿಂದ ಥಿಯೇಟರ್ಗಳು ಓಪನ್ ಆಗುತ್ತಿವೆ. ಥಿಯೇಟರ್ಗಳು ಓಪನ್ ಆದರೂ ಕೂಡ ಮೊದಲಿನ ಹಾಗೆ ಹೌಸ್ ಫುಲ್ ಪ್ರದರ್ಶನ ಇರುವಂತಿಲ್ಲ. ಮೊದಲೇ ವೀಕೆಂಡ್ ಹೊರತುಪಡಿಸಿದರೆ ಉಳಿದ ದಿನಗಳಲ್ಲಿನ ಶೋಗಳಲ್ಲಿ ಪ್ರೇಕ್ಷಕರ ಸಂಖ್ಯೆ ಕಡಿಮೆ ಇರುತ್ತಿತ್ತು. ಆದರೆ ಇದೀಗ ಶೇ.50 ರಷ್ಟು ಮಾತ್ರ ಥಿಯೇಟರ್ನಲ್ಲಿ ಕುಳಿತುಕೊಳ್ಳಬೇಕು ಎಂಬ ನಿಯಮ ಇದೀಗ ಥಿಯೇಟರ್ ಮಾಲೀಕರಿಗೆ ಕೊಂಚ ಕಹಿ ಸುದ್ದಿನೇ ಸರಿ.
ಇನ್ನು ಈ ಸಮಸ್ಯೆ 50 ರಿಂದ 100 ಸೀಟ್ ಇರುವ ಮಲ್ಟಿಫ್ಲೆಕ್ಸ್ಗಳಿಗೆ ತೊಂದರೆ ಆಗಬಹುದು ಎನ್ನಲಾಗಿದೆ. ಒಟ್ನಲ್ಲಿ ಅದೇನೆ ಇರಲಿ ಬಹು ದಿನಗಳಿಂದ ಕಾದಿದ್ದ ಪ್ರೇಕ್ಷಕರಿಗೆ ಸಿನಿಮಾ ನೋಡುವ ಅವಕಾಶ ಸಿಕ್ಕಿದರೆ, ಇತ್ತ ಕಲಾವಿದರು, ಥಿಯೇಟರ್ ಮಾಲೀಕರು ಕೊಂಚ ಚೇತರಿಕೆ ಕಾಣಬಹುದಾಗಿದೆ.