ಫೇಮಸ್ ಪವರ್ ಲಿಫ್ಟರ್ ಆಗಿರುವ ರಷ್ಯಾದ ಅನ್ನಾ ಟುರಾಯೆವಾ ಮೇಲುನೋಟಕ್ಕೆ ಹುಡುಗನ ಹಾಗೆ ಕಾಣುತ್ತಾರೆ ಎಂಬ ಕಾರಣಕ್ಕೆ ಅವರಿಗೊಂದು ವಿಚಿತ್ರ ಸನ್ನಿವೇಶ ಎದುರಿಸಬೇಕಾಗಿ ಬಂದಿದೆ.
ಇತ್ತೀಚೆಗೆ ವಿಮಾನವನ್ನೇರಲು ಮುಂದಾದ 42 ವರ್ಷದ ಟುರಾಯೆವಾ ಸ್ತ್ರೀ ಎಂದು ಭದ್ರತಾ ಸಿಬ್ಬಂದಿಗೆ ಅನುಮಾನ ಬಂದ ಕಾರಣ, ಅವರಿಗೆ ತಮ್ಮ ಲಿಂಗ ಸಾಬೀತು ಮಾಡಬೇಕಾಗಿ ಬಂದಿತ್ತು. ಸೇಂಟ್ ಪೀಟರ್ಸ್ಬರ್ಗ್ನಿಂದ ಮಾಸ್ಕೋಗೆ ಫ್ಲೈಟ್ನಲ್ಲಿ ಹೋಗುವವರಿದ್ದರು ಅನ್ನಾ.
“ಚೆಕ್ ಪಾಯಿಂಟ್ ದಾಟಿ ಮುಂದೆ ಹೋಗಲು ಬಿಡದ ಭದ್ರತಾ ಸಿಬ್ಬಂದಿ, ಪಾಸ್ ಪೋರ್ಟ್ನಲ್ಲಿ ಮಹಿಳೆ ಎಂದು ಬರೆದಿದ್ದರೂ ಸಹ ನನಗೆ ಈ ವಿಚಾರವಾಗಿ ಸಾಬೀತು ಮಾಡಲು ಕೇಳಿದ್ದು ಅವಮಾನವಾದ ಹಾಗೆ ಆಗಿದ್ದಲ್ಲದೇ ಶಾಕ್ ಸಹ ಆಗಿದೆ” ಎಂದು ಅನ್ನಾ ತಿಳಿಸಿದ್ದಾರೆ. ಆರು ಬಾರಿ ವಿಶ್ವ ಚಾಂಪಿಯನ್ ಮುಕುಟ ಏರಿಸಿಕೊಂಡಿರುವ ಅನ್ನಾ, ಪವರ್ಲಿಫ್ಟಿಂಗ್ನಲ್ಲಿ ಅನೇಕ ದಾಖಲೆಗಳನ್ನು ಸೃಷ್ಟಿಸಿದ್ದಾರೆ.