alex Certify ಲಾಡೆನ್ ಪುತ್ರಿಗೂ ಭೋಜಪುರಿ ಗಾಯಕನಿಗೂ ಮದ್ವೆಯಂತೆ…! ಇಲ್ಲಿದೆ ವೈರಲ್‌ ಆಗಿರೋ ಸುದ್ದಿ ಹಿಂದಿನ ಸತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಡೆನ್ ಪುತ್ರಿಗೂ ಭೋಜಪುರಿ ಗಾಯಕನಿಗೂ ಮದ್ವೆಯಂತೆ…! ಇಲ್ಲಿದೆ ವೈರಲ್‌ ಆಗಿರೋ ಸುದ್ದಿ ಹಿಂದಿನ ಸತ್ಯ

Osama bin Laden's 'Daughter' Marrying Bhojpuri Singer? Here's the Truth about Viral Clipping

ಒಸಾಮಾ ಬಿನ್ ಲಾಡೆನ್ ಮಗಳು ಜೋಯಾ – ಭೋಜಪುರಿ ಗಾಯಕ ಪ್ರದೀಪ್ ಮೌರ್ಯ ವಿವಾಹ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಇಬ್ಬರೂ ಒಟ್ಟಿಗೆ ಇರುವ ಫೋಟೋವೊಂದು ವೈರಲ್ ಆಗಿದೆ.

ಪತ್ರಿಕೆಯೊಂದರಲ್ಲಿ ಈ ಕುರಿತ ವರದಿ ಪ್ರಕಟಗೊಂಡಿದೆ ಎನ್ನಲಾಗಿದ್ದು, ಅದರ ತುಣುಕೊಂದು ಜಾಲತಾಣದಲ್ಲಿ ವೈರಲ್ ಆಗಿದೆ. ಈ ವರದಿಯ ಪ್ರಕಾರ ಜೋಯ ಎಂಬಾಕೆ ಒಸಾಮಾ ಬಿನ್ ಲಾಡೆನ್ ಮೊದಲ ಹೆಂಡತಿ ಮಗಳು ಎಂದು ಉಲ್ಲೇಖಿಸಿದೆ.

ಜೋಯ – ಪ್ರದೀಪ್ ಇಬ್ಬರೂ ಪ್ರೀತಿಸಿದ್ದು, ಮುಂಬೈನ ದೇಗುಲವೊಂದರಲ್ಲಿ ಹಿಂದು ಧರ್ಮಪದ್ಧತಿಯಂತೆ ವಿವಾಹವಾಗಿದ್ದಲ್ಲದೆ, ಜೋಯ ಹಿಂದು ಧರ್ಮ ಸ್ವೀಕರಿಸಿದ್ದಾಳೆ ಎಂದು ಇದರಲ್ಲಿ ಬರೆಯಲಾಗಿದೆ.

ಆದರೆ, ಜಾಲತಾಣದಲ್ಲಿ ವೈರಲ್ ಆಗಿರುವ ಪತ್ರಿಕೆ ತುಣುಕಿಗೂ, ಅದರಲ್ಲಿರುವ ಫೋಟೋಗೂ, ಸುದ್ದಿಗೂ ಸಂಬಂಧವಿದೆಯೇ ಎಂಬ ಅನುಮಾನವಿದ್ದು, ಅಸಲಿಗೆ ಲಾಡನ್ ಗೆ ಜೋಯ ಎಂಬ ಮಗಳೇ ಇಲ್ಲ.

ಈ ಬಗ್ಗೆ ಸತ್ಯಶೋಧನೆ ನಡೆಸಿದಾಗ ಫೋಟೋದಲ್ಲಿರುವುದು ಪಾಕಿಸ್ತಾನದ ನಟಿ, ರೂಪದರ್ಶಿ ಸೈರಾ ಯೂಸುಫ್. ಪಾಕಿಸ್ತಾನದ ನಟ ಶೆಹ್ರೋಜ್ ಸಬ್ಜ್ವಾರಿಯನ್ನು 7 ವರ್ಷದ ಹಿಂದೆ ಮದುವೆಯಾಗಿದ್ದು, ಕಳೆದ ಫೆಬ್ರವರಿಯಲ್ಲಿ ವಿಚ್ಛೇದನ ಪಡೆದಿದ್ದು, ಹೆಣ್ಣು ಮಗು ಕೂಡ ಇದೆ. ಪತ್ರಿಕಾ ವರದಿಯಂತೆ ಫೋಟೋ ಶಾಪ್‌ ಮಾಡಿ ಈ ಸುಳ್ಳು ಸುದ್ದಿಯನ್ನು ಹರಿಯಬಿಡಲಾಗಿದೆ ಎನ್ನಲಾಗಿದೆ.

https://twitter.com/DJ007P/status/1308980911569096705?ref_src=twsrc%5Etfw%7Ctwcamp%5Etweetembed%7Ctwterm%5E1308980911569096705%7Ctwgr%5Eshare_3&ref_url=https%3A%2F%2Fwww.news18.com%2Fnews%2Fbuzz%2Fosama-bin-ladens-daughter-marrying-bhojpuri-singer-heres-the-truth-about-viral-clipping-2924179.html

https://twitter.com/ArkJaiswal/status/497724834692861952?ref_src=twsrc%5Etfw%7Ctwcamp%5Etweetembed%7Ctwterm%5E497724834692861952%7Ctwgr%5Eshare_3&ref_url=https%3A%2F%2Fwww.news18.com%2Fnews%2Fbuzz%2Fosama-bin-ladens-daughter-marrying-bhojpuri-singer-heres-the-truth-about-viral-clipping-2924179.html

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...