ಕೊರೊನಾ ಸೋಂಕು ಹರಡುವ ಕುರಿತು ತಜ್ಞರು ಮತ್ತೊಂದು ಸೂಚನೆ ನೀಡಿದ್ದಾರೆ. ಸೋಂಕಿತ ವ್ಯಕ್ತಿ ಸೀನಿದಾಗ ಅಥವಾ ಕೆಮ್ಮಿದಾಗ ಆತನ ಬಾಯಿಂದ ಹೊರಬೀಳುವ ಎಂಜಲಿನ ಮೂಲಕ ವೈರಾಣು ಆರು ಅಡಿಗಿಂತಲೂ ದೂರ ವ್ಯಾಪಿಸುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ.
ವೈರಾಣು ಹರಡಿಕೊಂಡಿರುವ ಬಾಗಿಲು, ಟೇಬಲ್ ಸೇರಿದಂತೆ ವಿವಿಧ ವಸ್ತುಗಳನ್ನು ಸ್ಪರ್ಶಿಸಿ ಬಳಿಕ ಕಣ್ಣು, ಮೂಗು ಹಾಗೂ ಬಾಯಿ ಮುಟ್ಟಿಕೊಂಡರೂ ಕೊರೊನಾ ಸೋಂಕು ತಗಲುವ ಸಾಧ್ಯತೆ ಇದೆ. ಹೀಗಾಗಿ ಪದೇ ಪದೇ ಕೈಗಳನ್ನು ತೊಳೆದುಕೊಳ್ಳುವುದು ಬಹುಮುಖ್ಯ ಎಂದು ಹೇಳಲಾಗಿದೆ.
ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಅತ್ಯಗತ್ಯ ಎಂದು ಹೇಳಿರುವ ತಜ್ಞರು, ಒಂದೊಮ್ಮೆ ಜ್ವರ, ಶೀತ, ಕೆಮ್ಮು ಮೊದಲಾದ ರೋಗ ಲಕ್ಷಣಗಳು ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸಿ ಎಂದು ಸಲಹೆ ನೀಡಿದ್ದಾರೆ.