alex Certify ಮದುವೆ ಬಗ್ಗೆ ಪ್ರಶ್ನೆಗೆ ಅನುಷ್ಕಾ ನೀಡಿದ ಉತ್ತರ ಏನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಬಗ್ಗೆ ಪ್ರಶ್ನೆಗೆ ಅನುಷ್ಕಾ ನೀಡಿದ ಉತ್ತರ ಏನು ಗೊತ್ತಾ…?

ಹಲವಾರು ಯಶಸ್ವಿ ಸಿನಿಮಾಗಳ ಮೂಲಕ ಅನುಷ್ಕಾ ಶೆಟ್ಟಿ ಮನೆ ಮಾತಾದ ನಟಿ. ತನ್ನ ನಟನೆಯ ಮೂಲಕ ಕೋಟ್ಯಾಂತರ ಅಭಿಮಾನಿಗಳ ಹೃದಯ ಗೆದ್ದ ಈ ನಟಿಯ ಅಭಿನಯಕ್ಕೆ ಮನಸೋಲದೇ ಇರೋವ್ರಿಲ್ಲ. ಅನುಷ್ಕಾ ಶೆಟ್ಟಿಯ ನಿಶ್ಯಬ್ದಂ ಸಿನಿಮಾ ನಾಳೆ ಅಮೇಜಾನ್‌ನಲ್ಲಿ ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಪ್ರಮೋಷನ್ ಕಾರ್ಯದಲ್ಲಿ ಅನುಷ್ಕಾ ಬ್ಯುಸಿಯಾಗಿದ್ದಾರೆ.

ಕೊರೊನಾ ಇರೋದ್ರಿಂದ ಸೋಷಿಯಲ್ ಮೀಡಿಯಾಗಳ ಮೂಲಕ ಪ್ರಮೋಷನ್ ಕಾರ್ಯ ಮಾಡುತ್ತಿದ್ದಾರೆ ಈ ನಟಿ. ಇನ್ನು ಜೂಮ್ ಮೂಲಕ ಪತ್ರಕರ್ತರ ಜೊತೆ ಸಂವಾದ ಕೂಡ ಮಾಡಿದ್ದಾರೆ. ಹೀಗೆ ನಡೆದ ಸಂವಾದದಲ್ಲಿ ಪತ್ರಕರ್ತರೊಬ್ಬರು ಅನುಷ್ಕಾ ಮದುವೆಯ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

ನಿಮ್ಮ ಮದುವೆ ಯಾವಾಗ ಎಂದು ಪತ್ರಕರ್ತರೊಬ್ಬರು ಪ್ರಶ್ನೆ ಕೇಳಿದಾಗ ಒಂದು ಕ್ಷಣ ವಿಚಲಿತರಾದ ಅನುಷ್ಕಾ ನಂತರ ಈ ಪ್ರಶ್ನೆಗೆ ಉತ್ತರ ನೀಡಿಲ್ಲ. ಈ ಪ್ರಶ್ನೆಗೆ ಉತ್ತರಿಸೋದಕ್ಕೆ ನನಗೆ ಇಷ್ಟವಿಲ್ಲ ಎಂಬ ಉತ್ತರ ಹೇಳಿದ್ದಾರೆ. ಈ ಮೂಲಕ ಮದುವೆ ವಿಚಾರವನ್ನು ತಳ್ಳಿ ಹಾಕಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...