alex Certify ಮೊಬೈಲ್ ಬಿಲ್ ಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ತೆಗೆದುಕೊಂಡ ಟ್ರಾಯ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಬೈಲ್ ಬಿಲ್ ಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ತೆಗೆದುಕೊಂಡ ಟ್ರಾಯ್

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ, ಅಂತರರಾಷ್ಟ್ರೀಯ ಮೊಬೈಲ್ ರೋಮಿಂಗ್ ಸೇವೆಗಳ ನಿಯಮಗಳನ್ನು ಬದಲಾಯಿಸಿದೆ. ಕಂಪನಿಗಳು ಪೂರ್ವನಿಯೋಜಿತವಾಗಿ ಅಂತರರಾಷ್ಟ್ರೀಯ ಮೊಬೈಲ್ ರೋಮಿಂಗ್ ಸಕ್ರಿಯಗೊಳಿಸಲು ಸಾಧ್ಯವಿಲ್ಲ. ಈ ಸೇವೆಯನ್ನು ಬಳಕೆದಾರರ ಬೇಡಿಕೆಯ ಮೇರೆಗೆ ಮಾತ್ರ ನೀಡಬೇಕು.

ಗ್ರಾಹಕರು ರೋಮಿಂಗ್ ಸಕ್ರಿಯಗೊಳಿಸುವಂತೆ ಹೇಳಿದ್ರೆ ಕಂಪನಿಗಳು ಸಕ್ರಿಯಗೊಳಿಸಬೇಕು. ಅವ್ರ ಕೋರಿಕೆ ಮೇರೆಗೆ ನಿಷ್ಕ್ರಿಯಗೊಳಿಸಬಹುದು. ಟ್ರಾಯ್ ನಿಯಮದಂತೆ ಅಂತರರಾಷ್ಟ್ರೀಯ ಮೊಬೈಲ್ ರೋಮಿಂಗ್ ಸಕ್ರಿಯಗೊಂಡ ತಕ್ಷಣ ಟೆಲಿಕಾಂ ಕಂಪನಿಯು ಗ್ರಾಹಕರಿಗೆ ತಿಳಿಸಬೇಕಾಗುತ್ತದೆ.

ಎಸ್‌ಎಂಎಸ್, ಇ-ಮೇಲ್ ಅಥವಾ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಗ್ರಾಹಕರಿಗೆ ಸೇವೆ ಸಕ್ರಿಯಗೊಂಡ ಬಗ್ಗೆ ಹಾಗೂ ಸುಂಕಗಳ ಬಗ್ಗೆ ಮಾಹಿತಿಯನ್ನು ನೀಡಬೇಕಾಗುತ್ತದೆ. ಗ್ರಾಹಕರಿಗೆ ಅಂತರರಾಷ್ಟ್ರೀಯ ರೋಮಿಂಗ್ ನಿಂದ ಬರ್ತಿದ್ದ ದುಬಾರಿ ಬಿಲ್ ಆಘಾತವನ್ನು ತಪ್ಪಿಸಲು ಟ್ರಾಯ್ ಈ ಕ್ರಮ ತೆಗೆದುಕೊಂಡಿದೆ. ಮೊಬೈಲ್‌ನ ಪೋಸ್ಟ್ ಪೇಯ್ಡ್ ಸಂಪರ್ಕವನ್ನು ಬಳಸುತ್ತಿದ್ದರೆ, ಬಿಲ್ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು.

ರೋಮಿಂಗ್ ಶುಲ್ಕದ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಳ್ಳಬಾರದು ಎಂದು ಜಿಯೋ, ಏರ್ಟೆಲ್, ವೋಡಾಫೋನ್ ಗೆ ಟ್ರಾಯ್ ಹೇಳಿದೆ. ವಿಮಾನದಲ್ಲಿ ಕನೆಕ್ಟಿವಿಟಿ ನೀಡುವುದಾಗಿ ಜಿಯೋ ಈ ಹಿಂದೆ ಹೇಳಿತ್ತು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...