
ಹೆಲಿಕಾಪ್ಟರ್ ಹೊಡೆತ ಹಾಗೂ ಉತ್ತಮ ನಾಯಕತ್ವದ ಮೂಲಕ ವಿಶ್ವದಾದ್ಯಂತ ಪ್ರಸಿದ್ಧಿಯಾಗಿದ್ದ ಮಹೇಂದ್ರ ಸಿಂಗ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಈಗ ಧೋನಿ ಐಪಿಎಲ್ ನಲ್ಲಿ ಆಡ್ತಿದ್ದು, ಅವರು ಮನರಂಜನಾ ಜಗತ್ತಿಗೆ ಕಾಲಿಡಲಿದ್ದಾರೆ. ಯಸ್, ಧೋನಿ ಈ ನಿರ್ಧಾರ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.
ಮಹಿ ನಟನಾಗಿಯಲ್ಲ, ನಿರ್ಮಾಪಕರಾಗಿ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ. ಈ ವಿಷ್ಯವನ್ನು ಮಹೇಂದ್ರ ಸಿಂಗ್ ಧೋನಿ ಪತ್ನಿ ಸಾಕ್ಷಿ ಧೋನಿ ಬಹಿರಂಗಪಡಿಸಿದ್ದಾರೆ. ಧೋನಿ ವೆಬ್ ಸರಣಿಯಲ್ಲಿ ಕೆಲಸ ಮಾಡಲಿದ್ದಾರೆ. ವೆಬ್ ಸರಣಿಯೊಂದರ ನಿರ್ಮಾಣದ ಹೊಣೆಯನ್ನು ಧೋನಿ ಹೊರಲಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಾಕ್ಷಿ ಧೋನಿ ಈ ವಿಷ್ಯವನ್ನು ಬರೆದುಕೊಂಡಿದ್ದಾರೆ. ನಿಮ್ಮ ಪ್ರೀತಿ ಹಾಗೂ ಹಾರೈಕೆ ನಮಗೆ ಬೇಕೆಂದು ಸಾಕ್ಷಿ ಟ್ವೀಟ್ ಮಾಡಿದ್ದಾರೆ. ಇದೊಂದು ಅಘೋರಿಯ ಕಥೆಯಾಗಿರಲಿದೆ. ದ್ವೀಪವೊಂದರಲ್ಲಿ ಹೈಟೆಕ್ ಸೌಲಭ್ಯಗಳ ನಡುವೆ ಸಿಕ್ಕಿಬೀಳಲಿದ್ದಾರೆ ಎಂದು ಸಾಕ್ಷಿ ಹೇಳಿದ್ದಾರೆ. ಈ ಸರಣಿಗಾಗಿ ಸ್ಟಾರ್ ಕಾಸ್ಟ್ ಹುಡುಕಾಟ ನಡೆಯುತ್ತಿದೆ.ಈ ಸರಣಿಯ ಚಿತ್ರೀಕರಣ ಎಲ್ಲಿ ನಡೆಯಲಿದೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ.
ಧೋನಿಗಿಂತ ಮುಂಚೆಯೇ ಅನೇಕ ಭಾರತೀಯ ಕ್ರಿಕೆಟ್ ಆಟಗಾರರು ಚಲನಚಿತ್ರ ಜಗತ್ತಿಗೆ ಕಾಲಿಟ್ಟಿದ್ದಾರೆ. ವಿನೋದ್ ಕಾಂಬ್ಲಿ, ಅಜಯ್ ಜಡೇಜಾ ಸೇರಿದಂತೆ ಕೆಲವರು ಅದೃಷ್ಟ ಪರೀಕ್ಷಿಸಿದ್ದಾರೆ.
https://twitter.com/SaakshiSRawat/status/1311220601097314304?ref_src=twsrc%5Etfw%7Ctwcamp%5Etweetembed%7Ctwterm%5E1311220601097314304%7Ctwgr%5Eshare_3&ref_url=https%3A%2F%2Fhindi.news18.com%2Fnews%2Fentertainment%2Fbollywood-mahendra-singh-dhoni-enters-entertainment-industry-wife-sakshi-gives-all-details-ss-3275473.html