ಬರೋಬ್ಬರಿ 52 ಕೆಜಿ ಮೀನೊಂದನ್ನು ಹಿಡಿದ ಮಹಿಳೆಯೊಬ್ಬರು ರಾತ್ರೋರಾತ್ರಿ ಸಿರಿವಂತರಾದ ಘಟನೆ ಪಶ್ಚಿಮ ಬಂಗಾಳದಲ್ಲಿ ಘಟಿಸಿದೆ. ಇಲ್ಲಿನ ಸಾಗರ ದ್ವೀಪದ ಬಳಿ ಇರುವ ಚಕ್ಫುಲ್ಬುದಿ ಎಂಬ ಗ್ರಾಮದಲ್ಲಿ ಬೋಲಾ ಹೆಸರಿನ ಈ ಭಾರೀ ಮೀನನ್ನು ಹಿಡಿದಿದ್ದಾರೆ ಪುಷ್ಪಾ ಕಾರ್.
ಅವರ ಈ ಭಾರೀ ಬೇಟೆಗೆ ಮೂರು ಲಕ್ಷ ರೂ.ಗಳ ಸಂಪಾದನೆ ಆಗಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಈ ಮೀನು ಪ್ರತಿ ಕೆಜಿಗೆ 6,200 ರೂ.ಗಳಂತೆ ಮಾರಾಟವಾಗಿದೆ. ತಮ್ಮ ಈ ಕ್ಯಾಚ್ನಿಂದ ಮೂರು ಲಕ್ಷ ರೂ.ಗಳು ಸಿಕ್ಕಿವೆ ಎಂದು ಪುಷ್ಪಾ ಖಾತ್ರಿಪಡಿಸಿದ್ದಾರೆ.
ಮೀನನ್ನು ನದಿಯಿಂದ ಊರಿಗೆ ತರಲು ಬಹಳ ಪ್ರಯಾಸ ಪಟ್ಟ ಪುಷ್ಪಾಗೆ ಗ್ರಾಮಸ್ಥರು ನೆರವಾಗಿದ್ದು, ಅದನ್ನು ಮಾರುಕಟ್ಟೆಗೆ ಕೊಂಡೊಯ್ಯಲೂ ಸಹ ಜೊತೆಯಾಗಿದ್ದಾರೆ.
ಬೆಂಗಾಲಿಯಲ್ಲಿ ’ಭೋಲಾ’ ಎಂದು ಕರೆಯಲಾಗುವ ಈ ಮೀನಿಗೆ ಭಾರೀ ಬೆಲೆಯಿದ್ದು, ಅದರ ಕೊಬ್ಬನ್ನು ಆಗ್ನೇಯ ಏಷ್ಯಾದ ದೇಶಗಳಲ್ಲಿ ದೊಡ್ಡ ಮೊತ್ತಕ್ಕೆ ಮಾರಾಟ ಮಾಡಲಾಗುತ್ತದೆ.