ಕೊರೊನಾ ಸೋಂಕು ವ್ಯಾಪಿಸಿದ ಹಿನ್ನೆಲೆಯಲ್ಲಿ ಬಂದ್ ಆಗಿರುವ ಚೀನಾ ಮಹಾಗೋಡೆಗೆ ಭದ್ರತೆ ಹೆಚ್ಚಿಸಿದ್ದು, ಯಾರೂ ಕಾಲಿಡದಂತೆ ಎಚ್ಚರಿಸಿದೆ.
ಅದರಲ್ಲೂ ಅ.1 ರಿಂದ 8 ರಾಷ್ಟ್ರೀಯ ರಜೆ ದಿನ ಇರಲಿದ್ದು, ಇದನ್ನೂ ಸುವರ್ಣ ಸಮಯ ಎಂದು ಪರಿಗಣಿಸಿದೆ. ಪ್ರತಿ ವರ್ಷ ರಾಷ್ಟ್ರೀಯ ರಜೆ ದಿನಗಳಲ್ಲಿ ಚೀನಾ ಮಹಾಗೋಡೆ ಹತ್ತುವ ಪ್ರವಾಸಿಗರ ಸಂಖ್ಯೆ ಸಾಧಾರಣವಾಗಿ ಹೆಚ್ಚಿರುತ್ತದೆ.
ಕೊರೊನಾ ಕಾರಣದಿಂದ ಈ ಪ್ರವಾಸಕ್ಕೆ ಕಡಿವಾಣ ಹಾಕಿದ್ದು, ಕೆಲ ಖಾಸಗಿ ಸಂಸ್ಥೆಗಳು ಚೀನಾ ಮಹಾಗೋಡೆ ಹತ್ತಲು ಮುಂಗಡ ಬುಕಿಂಗ್ ಮಾಡುತ್ತಿರುವುದು ಬೀಜಿಂಗ್ ಆಡಳಿತದ ಗಮನಕ್ಕೆ ಬಂದಿದೆ.
ಹೀಗಾಗಿ ಭದ್ರತೆ ಹೆಚ್ಚಿಸಿದ್ದು, ಚೀನಾ ಮಹಾಗೋಡೆ ಹತ್ತಿದರೆ 200 ರಿಂದ 30 ಸಾವಿರ ಯೂನ್ (4404 ಡಾಲರ್) ದಂಡ ವಿಧಿಸುವುದಾಗಿ ಎಚ್ಚರಿಕೆ ಕೂಡ ನೀಡಿದೆ.