ಬದಲಾದ ಹವಾಮಾನ ಹಾಗೂ ಉಷ್ಣಾಂಶ ಏರಿಕೆಯಿಂದಾಗಿ ಹವಾಗುಣದಲ್ಲಿ ವ್ಯತ್ಯಯವಾಗುವುದು, ಸಮುದ್ರದ ನೀರಿನ ಮಟ್ಟ ಏರಿಕೆ ಮಾತ್ರವಲ್ಲದೆ, ಹೂವುಗಳ ಬಣ್ಣ ಬದಲಾವಣೆಗೂ ಕಾರಣವಾಗುತ್ತಿದೆ.
ಓಝೋನ್ ಕ್ಷೀಣಿಸುವಿಕೆ ಮತ್ತು ಜಾಗತಿಕ ತಾಪಮಾನ ಏರಿಕೆಯ ಪರಿಣಾಮದಿಂದಾಗಿ ಹೂವುಗಳ ಬಣ್ಣದಲ್ಲಿ ಬದಲಾವಣೆ ಆಗುತ್ತಿದೆ ಎಂದು ಇತ್ತೀಚಿನ ಸಂಶೋಧನೆಯಿಂದ ಬಹಿರಂಗವಾಗಿದೆ.
ಸಸ್ಯಗಳಲ್ಲಿನ ವರ್ಣದ್ರವ್ಯವು ನೇರಳಾತೀತ ಕಿರಣಗಳನ್ನು ಹೆಚ್ಚಾಗಿ ಹೀರಿಕೊಳ್ಳುತ್ತಿದ್ದು, ಇದರಿಂದಾಗಿ ಹೂವುಗಳ ಬಣ್ಣ ಬದಲಾವಣೆ ಆಗುತ್ತಿದೆ. ಅಷ್ಟೇ ಅಲ್ಲದೆ, ಇದರಿಂದ ಪರಾಗಸ್ಪರ್ಶಕ್ಕೂ ಅಡ್ಡಿ ಆಗುತ್ತಿದ್ದು, ಭವಿಷ್ಯದಲ್ಲಿ ಸಸ್ಯ ಪ್ರಭೇದಗಳೇ ನಶಿಸಿ ಹೋಗುವ ಅಪಾಯವೂ ಇದೆ.
ಮೂರು ಖಂಡಗಳ 42 ಪ್ರಭೇದದ 1,238 ಸಸ್ಯಗಳ ಮಾದರಿಯನ್ನು ಸಂಶೋಧನೆಗೆ ಒಳಪಡಿಸಿದ್ದು, 1941 ರಿಂದ 2007 ರ ನಡುವೆ ಈ ಸಸ್ಯಗಳಲ್ಲಿ ಶೇ.2 ರಷ್ಟು ನೇರಳಾತೀತ ವರ್ಣದ್ರವ್ಯದ ಪ್ರಮಾಣ ಹೆಚ್ಚಳ ಆಗಿದೆ.