
ದ್ವಿತೀಯ ಪಿಯುಸಿ ಪರೀಕ್ಷೆಯ ಅಕೌಂಟೆನ್ಸಿ ವಿಷಯದಲ್ಲಿ ವಿದ್ಯಾರ್ಥಿನಿಯೊಬ್ಬರಿಗೆ 99 ಅಂಕ ಬಂದಿದ್ದು, ಆದರೆ ನೂರಕ್ಕೆ ನೂರು ಅಂಕ ಗಳಿಸುವ ವಿಶ್ವಾಸವಿದ್ದ ಅವರು ಮರು ಎಣಿಕೆಗೆ ಕೋರಿದ್ದು, ಆದರೆ ಫಲಿತಾಂಶ ವ್ಯತಿರಿಕ್ತವಾಗಿದೆ.
ಶಿವಮೊಗ್ಗ ಜಿಲ್ಲೆ ಹೊಸನಗರ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಧಾರಿಣಿ ಅವರಿಗೆ ಅಕೌಂಟೆನ್ಸಿ ವಿಷಯದಲ್ಲಿ 99 ಅಂಕ ಬಂದಿತ್ತು. ಆದರೆ 100 ಅಂಕ ಬರುತ್ತದೆ ಎಂಬ ವಿಶ್ವಾಸ ಹೊಂದಿದ್ದ ಅವರು ಮರು ಎಣಿಕೆಗೆ ಕೋರಿದ್ದರು.
ಆದರೆ ಮರು ಎಣಿಕೆಯಲ್ಲಿ 99 ಅಂಕದ ಬದಲು 88 ಅಂಕ ನೀಡಲಾಗಿದೆ. ಒಂದು ಅಂಕ ಗಳಿಸಲು ಹೋಗಿ ವಿದ್ಯಾರ್ಥಿನಿ 11 ಅಂಕ ಕಳೆದುಕೊಂಡಂತಾಗಿದೆ. ಆದರೆ ಮರು ಎಣಿಕೆಯನ್ನು ಸಮರ್ಪಕವಾಗಿ ಮಾಡಿಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.