ಬಿರಿಯಾನಿಗಾಗಿ ಬರೋಬ್ಬರಿ 1.5 ಕಿಮೀ ಉದ್ದದ ಸರತಿ…! 01-10-2020 7:55AM IST / No Comments / Posted In: Business, Karnataka, Latest News ಲಾಕ್ ಡೌನ್ ಕಾರಣದಿಂದ ಕಳೆದ ಆರು ತಿಂಗಳುಗಳಿಂದ ಹೊರಗಡೆ ತಿನ್ನದೇ ಬಾಯಿ ಚಪಲವನ್ನು ಕಷ್ಟಪಟ್ಟು ಹಿಡಿದುಕೊಂಡಿದ್ದ ರಾಜ್ಯದ ಜನತೆಗೆ ಇದೀಗ ರೆಸ್ಟೋರೆಂಟ್ ಗಳನ್ನು ಮತ್ತೆ ಆರಂಭಿಸಲು ಅನುವು ಮಾಡಿಕೊಟ್ಟಿರುವುದರಿಂದ ಖುಷಿಯಾಗಿದೆ. ಹೊಸಕೋಟೆಯಲ್ಲಿ ಇತ್ತೀಚೆಗೆ ಭಾರೀ ಫೇಮಸ್ಸಾಗಿರುವ ಆನಂದ್ ಬಿರಿಯಾನಿ ಶಾಪ್ ಬಳಿ ಇದೇ ಭಾನುವಾರದಂದು ದೊಡ್ಡ ಸಂಖ್ಯೆಯಲ್ಲಿ ಜನರು ಕಿಕ್ಕಿರಿದು ನಿಂತಿದ್ದರು. ಸರಿ ಸುಮಾರು 1.5 ಕಿಮೀ ಉದ್ದದ ಸರತಿಯಲ್ಲಿ ಜನರು ನಿಂತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಂಗಳೂರು ನಗರದಿಂದ 25 ಕಿಮೀ ದೂರದಲ್ಲಿರುವ ಈ ರೆಸ್ಟೋರೆಂಟ್ ನಲ್ಲಿ ಬಿರಿಯಾನಿ ಬೇಗ ಸಿಗಲೆಂದು ಜನರು ಬೆಳ್ಳಂಬೆಳಿಗ್ಗೆ ಬಂದು ಸಾಲಿನಲ್ಲಿ ನಿಂತುಬಿಡುತ್ತಾರೆ. ಲಾಕ್ ಡೌನ್ ಮುಂಚಿನ ದಿನಗಳಿಗೆ ಹೋಲಿಸಿದಲ್ಲಿ ಈಗ 20%ನಷ್ಟು ಬಿರಿಯಾನಿ ಮಾರಾಟದಲ್ಲಿ ಹೆಚ್ಚಳವಾಗಿದೆ ಎಂದು ರೆಸ್ಟೋರೆಂಟ್ ಮಾಲೀಕ ಆನಂದ್ ತಿಳಿಸಿದ್ದಾರೆ. Queue for biryani at Hoskote, Bangalore. Send by @ijasonjosephTell me what biryani this is and is it free? pic.twitter.com/XnUOZJJd2c — Kaveri 🇮🇳 (@ikaveri) September 26, 2020