alex Certify ಗಂಗಾ ನದಿಯಲ್ಲಿ ಅಪಾಯಕಾರಿ ಕ್ಯಾಟ್ ಫಿಶ್ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಂಗಾ ನದಿಯಲ್ಲಿ ಅಪಾಯಕಾರಿ ಕ್ಯಾಟ್ ಫಿಶ್ ಪತ್ತೆ

Catfish Native to Amazon Found in Varanasi, Scientists Term it Dangerous for Ganges' Ecology

ದಕ್ಷಿಣ ಅಮೇರಿಕಾದ ಅಮೆಜಾನ್ ನದಿಯಲ್ಲಿರುವ ಅಪಾಯಕಾರಿ ಪ್ರಭೇದದ ಕ್ಯಾಟ್ ಫಿಶ್ ವಾರಾಣಸಿಯ ಗಂಗಾ ನದಿಯಲ್ಲಿ ಪತ್ತೆಯಾಗಿ ಭೀತಿ ಹುಟ್ಟಿಸಿದೆ. ಈ ಮೀನು ನದಿ ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಆತಂಕ ಎದುರಾಗಿದ್ದು, ಪ್ರಾಣಿಶಾಸ್ತ್ರಜ್ಞರು ಕೂಡ ಕಳವಳಗೊಂಡಿದ್ದಾರೆ.

ಭಾರತೀಯ ವನ್ಯಜೀವಿ ಸಂಸ್ಥೆ ಹಾಗೂ ನಮಾಮಿ ಗಂಗಾ ಕಾರ್ಯಕ್ರಮದಡಿ ನದಿ, ನೀರು, ಮೀನು, ಡಾಲ್ಫಿನ್ ಗಳ ರಕ್ಷಣೆಗಾಗಿ ನಿಯೋಜನೆಗೊಂಡಿರುವ ಭದ್ರತಾ ಸಿಬ್ಬಂದಿಗೆ ಈ ಮೀನು ದಕ್ಷಿಣ ಕಾಶಿಯ ರಾಮ್ನಾ ಎಂಬ ಹಳ್ಳಿಯಲ್ಲಿ ಸಿಕ್ಕಿದ್ದು, ಬನಾರಸ್ ಹಿಂದು ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗಕ್ಕೆ ಕಳುಹಿಸಿಕೊಡಲಾಗಿದೆ ಎಂದು ಕಾವಲುಗಾರ ದರ್ಶನ್ ನಿಶಾದ್ ತಿಳಿಸಿದ್ದಾರೆ.

ಈ ಕುರಿತು ವಿವರಣೆ ನೀಡಿರುವ ಪ್ರಾಣಿಶಾಸ್ತ್ರಜ್ಞ ಪ್ರೊ. ಬೆಚನ್ ಲಾಲ್, ಹೈಪೋಸ್ಟಮಸ್ ಪ್ಲೆಕೋಸ್ಟಮಸ್ ಎಂಬ ವೈಜ್ಞಾನಿಕ ಹೆಸರಿನಿಂದ ಗುರುತಿಸುವ ಇವು ನಮ್ಮ ಭಾರತದ್ದಲ್ಲ. ಅಮೆಜಾನ್ ಕಾಡಿನಲ್ಲಿರುವ ನದಿಯಲ್ಲಿ ಕಾಣಸಿಗುವ ಇದು, ಇತ್ತೀಚೆಗೆ ತೆಲಂಗಾಣದಲ್ಲೂ ಪತ್ತೆಯಾಗಿತ್ತು ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...