
ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ದುಷ್ಟರ ಕ್ರೌರ್ಯಕ್ಕೆ ಎರಡು ದಿನಗಳ ಶಿಶು ಬಲಿಯಾಗಿದೆ.
ಎರಡು ದಿನಗಳ ಹಿಂದೆ ಜನಿಸಿದ್ದ ಮಗುವಿನ ಮೈ ಮೇಲೆ ಸ್ಕ್ರೂ ಡ್ರೈವರ್ ನಿಂದ 100ಕ್ಕೂ ಹೆಚ್ಚು ಬಾರಿ ತಿವಿಯಲಾಗಿದೆ. ನಂತ್ರ ಬಟ್ಟೆಯಲ್ಲಿ ಮಗುವನ್ನು ಸುತ್ತಿ ದೇವಸ್ಥಾನದ ಬದಿಯಲ್ಲಿ ಎಸೆದು ಹೋಗಲಾಗಿದೆ.
ಭೋಪಾಲ್‌ನಲ್ಲಿ 15 ದಿನಗಳಲ್ಲಿ ನವಜಾತ ಶಿಶುವನ್ನು ಕೊಲೆ ಮಾಡಿದ ಮೂರನೇ ಪ್ರಕರಣ ಇದಾಗಿದೆ. ಬಾಲಕಿಯ ಮೃತ ದೇಹವನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಬಾಲಕಿ ಮೃತದೇಹ ನೋಡಿದ ಪೊಲೀಸರ ಕಣ್ಣಲ್ಲೂ ನೀರು ಬಂದಿದೆ. ನವಜಾತ ಶಿಶುವಿನ ದೇಹದಲ್ಲಿ 100 ಕ್ಕೂ ಹೆಚ್ಚು ರಂಧ್ರಗಳಾಗಿವೆ.
ನವಜಾತ ಶಿಶುವಿನ ಪಾಲಕರ ಬಗ್ಗೆ ಈವರೆಗೂ ಯಾವುದೇ ಮಾಹಿತಿ ಸಿಕ್ಕಿಲ್ಲ. ದುಷ್ಟರು ನವಜಾತ ಶಿಶುವನ್ನು ದೇವಸ್ಥಾನದ ಬಳಿ ಎಸೆದಿದ್ದಾರೆ. ಪ್ರಾಣಿಗಳು ಮಗುವನ್ನು ಈ ಸ್ಥಿತಿಗೆ ತಂದಿವೆ ಎಂದು ಮೊದಲು ನಂಬಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಸ್ಕ್ರೂ ಡ್ರೈವರ್ ನಿಂದ ಮಗುವಿನ ದೇಹಕ್ಕೆ ಗಾಯ ಮಾಡಿರುವುದು ಸ್ಪಷ್ಟವಾಗಿದೆ.