ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ 35 ದಿನಗಳ ಬಾಕಿಯಿದೆ. ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆ ರಂಗು ಪಡೆಯುತ್ತಿದೆ. ಮೊದಲ ಬಾರಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪ್ರತಿಸ್ಪರ್ಧಿ ಜೋ ಬಿಡನ್ ಮುಖಾಮುಖಿಯಾಗಿದ್ದಾರೆ. ಮಂಗಳವಾರ ಸಂಜೆ ಮೊದಲ ಬಾರಿ ನಡೆದ ಅಧ್ಯಕ್ಷೀಯ ಚರ್ಚೆಯಲ್ಲಿ ಟ್ರಂಪ್, ಗಂಭೀರ ಆರೋಪ ಮಾಡಿದ್ದಾರೆ.
ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡನ್, ಟ್ರಂಪ್ ಮೇಲೆ ಆರೋಪ ಮಾಡಿದ್ದರು. ಟ್ರಂಪ್ ದೇಶದಲ್ಲಿ ಕೊರೊನಾ ನಿಯಂತ್ರಿಸಲು ವಿಫಲವಾಗಿದ್ದಾರೆ ಎಂದಿದ್ದರು. ಇದಕ್ಕೆ ಉತ್ತರ ನೀಡಿದ ಟ್ರಂಪ್, ಭಾರತ, ರಷ್ಯಾ ಮತ್ತು ಚೀನಾಗಳ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಈ ದೇಶಗಳು ಕೊರೊನಾ ವೈರಸ್‌ನಿಂದ ಸಾವನಪ್ಪಿದವರ ಅಂಕಿಅಂಶಗಳನ್ನು ಮರೆಮಾಡುತ್ತಿವೆ ಎಂದು ಆರೋಪಿಸಿದರು.
ಕೊರೊನಾ ವೈರಸ್ ವಿರುದ್ಧ ಹೋರಾಡಲು ನಮ್ಮ ಸರ್ಕಾರ ಮಾಸ್ಕ್, ಸ್ಯಾನಿಟೈಜರ್, ಔಷಧಿಗಳನ್ನು ತಂದಿದೆ. ಶೀಘ್ರವೇ ಲಸಿಕೆಯನ್ನು ಬಿಡುಗಡೆ ಮಾಡಲಿದೆ. ಕಂಪನಿಗಳ ಜೊತೆ ಮಾತನಾಡಿದ್ದೇನೆ. ಕೆಲವೇ ವಾರಗಳಲ್ಲಿ ಲಸಿಕೆ ಮಾರುಕಟ್ಟೆಗೆ ಬರಲಿದೆ ಎಂದಿದ್ದಾರೆ. ಯುಎಸ್ಎನಲ್ಲಿ ಸಾವುಗಳ ಸಂಖ್ಯೆ ಕಡಿಮೆಯಾಗ್ತಿದೆ. ಭಾರತ, ರಷ್ಯಾ ಮತ್ತು ಚೀನಾದಲ್ಲಿ ಸಾವಿನ ನಿಖರ ಅಂಕಿ ಅಂಶಗಳು ತಿಳಿಸುತ್ತಿಲ್ಲವೆಂದು ಟ್ರಂಪ್ ಹೇಳಿದ್ದಾರೆ.