alex Certify ಗಮನಿಸಿ: ʼಉಚಿತʼ ಸಿಲಿಂಡರ್ ಪಡೆಯಲು ಇಂದು ಕೊನೆ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ: ʼಉಚಿತʼ ಸಿಲಿಂಡರ್ ಪಡೆಯಲು ಇಂದು ಕೊನೆ ಅವಕಾಶ

 सितंबर के बाद नहीं मिलेगा इस योजना का लाभ: इस योजना के लाभार्थियों को सितंबर के बाद अब इस योजना के तहत गैस सिलेंडर फ्री में नहीं मिलेगा. लिहाजा इस योजना का लाभ उठाने के लिए अब आपके पास आखिरी मौका बचा है. ऐसे में अगर आप इस योजना का लाभ उठाना चाहते हैं तो आपको फटाफट रजिस्ट्रेशन (Registration) कराना होगा. तभी आप इस योजना का लाभ उठा सकते हैं.

ಪ್ರಧಾನ್ ಮಂತ್ರಿ ಉಜ್ವಲಾ ಯೋಜನೆ ಅಡಿಯಲ್ಲಿ ಮೋದಿ ಸರ್ಕಾರ ಬಡ ಗ್ರಾಮೀಣ ಮಹಿಳೆಯರಿಗೆ ಉಚಿತ ಗ್ಯಾಸ್ ಸಿಲಿಂಡರ್ ವಿತರಿಸುತ್ತದೆ. ಸೆಪ್ಟೆಂಬರ್ ನಂತರ ಗ್ಯಾಸ್ ಸಿಲಿಂಡರ್‌ ಉಚಿತವಾಗಿ ಸಿಗುವುದಿಲ್ಲ. ಕೊರೊನಾ ಕಾರಣಕ್ಕೆ ಉಜ್ವಲಾ ಯೋಜನೆಯಡಿ ಗ್ಯಾಸ್ ಸಿಲಿಂಡರ್ ತೆಗೆದುಕೊಂಡ 7.4 ಕೋಟಿ ಮಹಿಳೆಯರಿಗೆ ಮೂರು ಸಿಲಿಂಡರ್ ಉಚಿತವಾಗಿ ನೀಡುವುದಾಗಿ ಸರ್ಕಾರ ಘೋಷಿಸಿತ್ತು. ಏಪ್ರಿಲ್‌ನಿಂದ ಪ್ರಾರಂಭವಾದ ಈ ಯೋಜನೆಯನ್ನು ಸೆಪ್ಟೆಂಬರ್ ಅಂತ್ಯದವರೆಗೆ ವಿಸ್ತರಿಸಲಾಯಿತು. ಈ ಯೋಜನೆಯ ಲಾಭ ಪಡೆಯಲು ಇವತ್ತೊಂದು ದಿನ ಮಾತ್ರ ನಿಮಗೆ ಅವಕಾಶವಿದೆ.

ತಕ್ಷಣ ಹೆಸರು ನೋಂದಾಯಿಸಿದ್ರೆ ಮಾತ್ರ ನೀವು ಈ ಯೋಜನೆ ಲಾಭ ಪಡೆಯಬಹುದು. ಯೋಜನೆಯಡಿ ನೋಂದಣಿ ಪಡೆಯುವುದು ತುಂಬಾ ಸುಲಭ. ಉಜ್ವಾಲಾ ಯೋಜನೆಯಡಿ ಬಿಪಿಎಲ್ ಕುಟುಂಬದ ಮಹಿಳೆ ಗ್ಯಾಸ್ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸಬೇಕು. ಈ ಯೋಜನೆಗೆ ಸಂಬಂಧಿಸಿದ ಅಧಿಕೃತ ವೆಬ್‌ಸೈಟ್ pmujjwalayojana.com ಗೆ ಹೋಗಿ ವಿವರವಾಗಿ ಮಾಹಿತಿಯನ್ನು ಪಡೆಯಬಹುದು. ಹೆಸರು ನೋಂದಾಯಿಸಲು ಮೊದಲು ಫಾರ್ಮ್ ಭರ್ತಿ ಮಾಡಬೇಕು.

ಮಹಿಳೆ ತನ್ನ ಪೂರ್ಣ ವಿಳಾಸ, ಜನ ಧನ್ ಬ್ಯಾಂಕ್ ಖಾತೆ ಮತ್ತು ಕುಟುಂಬದ ಎಲ್ಲ ಸದಸ್ಯರ ಆಧಾರ್ ಸಂಖ್ಯೆಯನ್ನು ನೀಡಬೇಕಾಗುತ್ತದೆ. ಅರ್ಜಿ ಪರಿಶೀಲಿಸಿದ ನಂತ್ರ ದೇಶದ ತೈಲ ಕಂಪನಿಗಳು ಅರ್ಹ ಫಲಾನುಭವಿಗೆ ಎಲ್ಪಿಜಿ ಸಂಪರ್ಕವನ್ನು ನೀಡುತ್ತವೆ.

ಉಜ್ವಲಾ ಯೋಜನೆಯ ಲಾಭವನ್ನು ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಸಿಗಲಿದೆ. ಸಬ್ಸಿಡಿ ಮೊತ್ತವನ್ನು ಪಡೆಯಲು, ಯಾವುದೇ ರಾಷ್ಟ್ರೀಯ ಬ್ಯಾಂಕಿನಲ್ಲಿ ಉಳಿತಾಯ ಖಾತೆಯನ್ನು ಹೊಂದಿರುವುದು ಅವಶ್ಯಕ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...