ಫರಿದಾಬಾದ್‌ನ ಹೋಟೆಲ್‌ವೊಂದರಲ್ಲಿ ಪತಿಗೆ ಮೋಸ ಮಾಡಿ ಪ್ರೇಮಿ ಜೊತೆಗಿದ್ದ ಪತ್ನಿ, ಪತಿ ಕೈಗೆ ಸಿಕ್ಕಿಬಿದ್ದಿದ್ದಾಳೆ. ಹೊಟೇಲ್ ನಲ್ಲಿಯೇ ಮೂವರ ಮಧ್ಯೆ ಗಲಾಟೆ ಶುರುವಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ಮೂವರನ್ನು ಠಾಣೆಗೆ ಕರೆದೊಯ್ದಿದ್ದಾರೆ.
ಮಹಿಳೆಗೆ ಮೂರು ವರ್ಷಗಳ ಹಿಂದೆ ಮದುವೆಯಾಗಿತ್ತು. ಮದುವೆಗೂ ಮೊದಲು ಆಕೆ ತನ್ನ ಗ್ರಾಮದ ಯುವಕನ ಜೊತೆ ಪ್ರೇಮ ಸಂಬಂಧದಲ್ಲಿದ್ದಳು. ಮದುವೆ ನಂತ್ರವೂ ಇದು ಮುಂದುವರೆದಿತ್ತು. ಒಂದು ದಿನ ಪ್ರೇಮಿ ಜೊತೆ ಓಡಿ ಹೋಗಿದ್ದಳು. ಇದು ಗೊತ್ತಾದ ಹುಡುಗಿ ಮನೆಯವರು ಪತಿಯ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಮತ್ತೆ ಗಂಡನ ಮನೆಗೆ ಬಂದ ಪತ್ನಿ ಎರಡು ವಾರದ ಹಿಂದೆ ತವರಿಗೆ ಹೋಗಿದ್ದಳು.
ತವರಿಗೆ ಹೋಗ್ತಿದ್ದಂತೆ ಮತ್ತೆ ಬಾಯ್ ಫ್ರೆಂಡ್ ಭೇಟಿಯಾಗಿದ್ದಾಳೆ. ಆಕೆ ಬಾಯ್ ಫ್ರೆಂಡ್ ಜೊತೆ ತಿರುಗಾಡ್ತಿದ್ದಾಳೆಂದು ಪತಿ ಸೋದರ ಸಂಬಂಧಿ ಕರೆ ಮಾಡಿ ಹೇಳಿದ್ದಾನೆ. ತಕ್ಷಣ ಅಲ್ಲಿಗೆ ಬಂದ ಪತಿ, ಪತ್ನಿ ಹುಡುಕಾಟ ನಡೆಸಿದ್ದಾನೆ. ಹೊಟೇಲ್ ನಲ್ಲಿ ಪತ್ನಿ ಇರುವುದು ಗೊತ್ತಾಗಿದೆ. ತಕ್ಷಣ ಅಲ್ಲಿಗೆ ಹೋದ ಪತಿ, ಬಾಯ್ ಫ್ರೆಂಡ್ ಹಾಗೂ ಪತ್ನಿ ಮೇಲೆರಗಿದ್ದಾನೆ.