ಮುಂದಿನ ವರ್ಷ ಜನವರಿಯಿಂದ ಚೆಕ್ ಪೇಮೆಂಟ್ ವಿಧಾನ ಬದಲಾಗಲಿದೆ. 50 ಸಾವಿರ ಅಥವಾ ಅದಕ್ಕಿಂತ ಹೆಚ್ಚು ಹಣದ ಚೆಕ್ ಪಾವತಿ ವೇಳೆ ಪ್ರಮುಖ ಮಾಹಿತಿಯನ್ನು ಎರಡೆರಡು ಬಾರಿ ನೀಡಬೇಕು. ಸೌಲಭ್ಯ ಪಡೆಯುವ ಇಲ್ಲವೆ ಬಿಡುವ ನಿಧಾರ ಖಾತೆದಾರನಿಗೆ ಬಿಟ್ಟಿದ್ದಾಗಿರುತ್ತದೆ. ಆದ್ರೆ 5 ಲಕ್ಷಕ್ಕಿಂತ ಹೆಚ್ಚು ಹಣ ಪಾವತಿಗೆ ಈ ಸೌಲಭ್ಯವನ್ನು ಬ್ಯಾಂಕ್ ಕಡ್ಡಾಯಗೊಳಿಸಲಿದೆ.
ಪೊಸಿಟಿವ್ ಪೇ ಸಿಸ್ಟಂ ಅಡಿಯಲ್ಲಿ ಚೆಕ್ ನೀಡುವ ವ್ಯಕ್ತಿ ಎಸ್‌ಎಂಎಸ್, ಮೊಬೈಲ್ ಅಪ್ಲಿಕೇಶನ್, ಇಂಟರ್ನೆಟ್ ಬ್ಯಾಂಕಿಂಗ್ ಅಥವಾ ಎಟಿಎಂನಂತಹ ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ಚೆಕ್‌ಗೆ ಸಂಬಂಧಿಸಿದ ಕೆಲವು ಮಾಹಿತಿಯನ್ನು ನೀಡಬೇಕು. ಚೆಕ್ ದಿನಾಂಕ, ಫಲಾನುಭವಿಯ ಹೆಸರು, ಪಾವತಿಸುವವರು ಮತ್ತು ಪಾವತಿ ಮೊತ್ತ ಇತ್ಯಾದಿಗಳ ಮಾಹಿತಿ ನೀಡಬೇಕು.
ಈ ಎಲ್ಲ ಮಾಹಿತಿ ನೀಡಿದ ನಂತ್ರ ಕ್ರಾಸ್ ಚೆಕ್ ಮಾಡಲಾಗುವುದು. ಈ ವೇಳೆ ತಪ್ಪು ಕಂಡು ಬಂದಲ್ಲಿ ಚೆಕ್ ಕ್ಯಾನ್ಸಲ್ ಮಾಡಲಾಗುವುದು. ನಂತ್ರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆರ್ಬಿಐ ಹೇಳಿದೆ. ಜನವರಿ 1, 2021ರಿಂದ ಈ ನಿಯಮ ಜಾರಿಗೆ ಬರಲಿದೆ ಎನ್ನಲಾಗಿದೆ. ಈ ಬಗ್ಗೆ ಎಲ್ಲ ಗ್ರಾಹಕರಿಗೆ ಮಾಹಿತಿ ನೀಡುವಂತೆ ಬ್ಯಾಂಕ್ ಗಳಿಗೆ ಆರ್ ಬಿ ಐ ಸೂಚಿಸಿದೆ.