ಭೋಪಾಲ್: ಸೆಲ್ಫಿ ತೆಗೆಯುವಾಗಲೇ ಜಾರಿ ಬಿದ್ದು ಮಹಿಳೆ ಮೃತಪಟ್ಟ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ವಿಧಿಶಾ ಪಟ್ಟಣದ ಹಿಮಾನಿ ಮಿಶ್ರಾ ಮೃತಪಟ್ಟ ಮಹಿಳೆ ಎಂದು ಹೇಳಲಾಗಿದೆ.
ಭೋಪಾಲ್ ಹಲಾಲಿ ಡ್ಯಾಮ್ ಜಲಪಾತ ವೀಕ್ಷಣೆಗೆ ಕುಟುಂಬದವರೊಂದಿಗೆ ಆಗಮಿಸಿದ್ದ ಹಿಮಾನಿ ಜಲಪಾತದ ತುದಿಯಲ್ಲಿ ಸೆಲ್ಫಿ ತೆಗೆದುಕೊಳ್ಳುವ ವೇಳೆ ಜಾರಿ ಬಿದ್ದಿದ್ದು, ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ಅವರ ರಕ್ಷಣೆಗೆ ನಡೆಸಿದ ಪ್ರಯತ್ನಗಳು ವಿಫಲವಾಗಿದ್ದು, 16 ಗಂಟೆಯ ಹುಡುಕಾಟದ ನಂತರ ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.