ಬೇಸಿಗೆ ಬಿಸಿಲ ಮಧ್ಯೆಯೂ ಶಾರ್ಟ್ಸ್ ಧರಿಸುವುದನ್ನು ನಿಷೇಧಿಸಿದ್ದ ಶಾಲೆ ವಿರುದ್ಧ ವಿದ್ಯಾರ್ಥಿಗಳು ವಿಭಿನ್ನವಾಗಿ ಪ್ರತಿಭಟನೆ ಮಾಡಿದ್ದಾರೆ. ಎಕ್ಸೆಟರ್‌ನ ಡೆವೊನ್‌ನಲ್ಲಿರುವ ಐಎಸ್‌ಸಿಎ ಅಕಾಡೆಮಿಯಲ್ಲಿ ಘಟನೆ ನಡೆದಿದೆ. ಶಾರ್ಟ್ಸ್ ಗೆ ನಿಷೇಧ ಹೇರಿದ್ದ ಕಾರಣ ವಿದ್ಯಾರ್ಥಿಗಳು ಸ್ಕರ್ಟ್ ಧರಿಸಿ ಬಂದಿದ್ದರು.
ಐದು ವಿದ್ಯಾರ್ಥಿಗಳು ಸೆಕೆ ಕಾರಣಕ್ಕೆ ಶಾರ್ಟ್ಸ್ ಧರಿಸಿ ಬಂದಿದ್ದರು ಎನ್ನಲಾಗಿದೆ. ಶಿಕ್ಷಕರು ಸಣ್ಣ ಬಟ್ಟೆ ಧರಿಸಿದ್ದರಿಂದ ಅವರನ್ನು ತರಗತಿಯಿಂದ ಹೊರಕ್ಕೆ ಹಾಕಿದ್ದರಂತೆ. ಇದನ್ನು ವಿರೋಧಿಸಿ ವಿದ್ಯಾರ್ಥಿಗಳು ಸ್ಕರ್ಟ್ ಧರಿಸಿ ಬಂದಿದ್ದಾರೆ ಎನ್ನಲಾಗಿದೆ.
ಆದ್ರೆ ವಿದ್ಯಾರ್ಥಿಯೊಬ್ಬನ ತಾಯಿ, ಪ್ರಾಂಶುಪಾಲರ ಹೇಳಿಕೆ ಮೇರೆಗೆ ಮಕ್ಕಳು ಸ್ಕರ್ಟ್ ಧರಿಸಿದ್ದರು ಎಂದಿದ್ದಾಳೆ. ವಿದ್ಯಾರ್ಥಿಗಳು ಸೆಕೆಯಾಗ್ತಿದೆ ಎಂದು ಪ್ರಾಂಶುಪಾಲರಿಗೆ ಹೇಳಿದ್ದರಂತೆ. ಅವರು ನಿಮಗಿಷ್ಟವಾದ್ರೆ ಸ್ಕರ್ಟ್ ಧರಿಸಿ ಬನ್ನಿ ಎಂದಿದ್ದರಂತೆ. ಪ್ರಾಂಶುಪಾಲರ ವ್ಯಂಗ್ಯವನ್ನು ವಿದ್ಯಾರ್ಥಿಗಳು ಸತ್ಯವೆಂದು ಭಾವಿಸಿ ಸ್ಕರ್ಟ್ ಧರಿಸಿ ಬಂದಿದ್ದಾರೆ ಎಂದು ವಿದ್ಯಾರ್ಥಿಯ ತಾಯಿ ಹೇಳಿದ್ದಾಳೆ. ವಿದ್ಯಾರ್ಥಿಗಳ ವಿರುದ್ಧ ಶಾಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ.