alex Certify ಮಸಲ್ ಕ್ಯಾಚ್ ಅಂದ್ಕೊಂಡಿದ್ದೆ, ಆದ್ರೆ…; ಅನಾರೋಗ್ಯದ ಬಗ್ಗೆ ಶರಣ್ ಪ್ರತಿಕ್ರಿಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಸಲ್ ಕ್ಯಾಚ್ ಅಂದ್ಕೊಂಡಿದ್ದೆ, ಆದ್ರೆ…; ಅನಾರೋಗ್ಯದ ಬಗ್ಗೆ ಶರಣ್ ಪ್ರತಿಕ್ರಿಯೆ

ಬೆಂಗಳೂರು: ಮೂರು ದಿನಗಳಲ್ಲಿ ಹೊಟ್ಟೆನೋವು ಕಡಿಮೆಯಾಗದಿದ್ದರೆ ಸರ್ಜರಿ ಮಾಡಬೇಕಾಗುತ್ತದೆ ಎಂದು ವೈದ್ಯರು ಸೂಚಿಸಿದ್ದಾರೆ ಎಂದು ಸ್ಯಾಂಡಲ್ ವುಡ್ ನಟ ಶರಣ್ ತಿಳಿಸಿದ್ದಾರೆ.

ತೀವ್ರ ಹೊಟ್ಟೆನೋವಿನಿಂದ ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದ ನಟ ಶರಣ್ ಇಂದು ಡಿಸ್ಚಾರ್ಜ್ ಆಗಿದ್ದು, ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ. ಕಿಡ್ನಿಯಲ್ಲಿ ಸಣ್ಣ ಸ್ಟೋನ್ ಇದೆ ಎಂದು ವೈದ್ಯರು ಹೇಳಿದ್ದಾರೆ. ಇನ್ನು ಮೂರು ದಿನಗಳಲ್ಲಿ ನೋವು ಕಡಿಮೆಯಾಗದಿದ್ದರೆ ಸರ್ಜರಿ ಮಾಡಬೇಕು. ಯಾವುದೇ ತೊಂದರೆಯಿಲ್ಲವೆಂದಿದ್ದಾರೆ ಎಂದರು.

ಮೊದ ಮೊದಲು ಮಸಲ್ ಕ್ಯಾಚ್ ಇರಬೇಕು ಹಾಗಾಗಿ ಹೊಟ್ಟೆ ನೋವಾಗುತ್ತಿದೆ ಎಂದುಕೊಂಡಿದ್ದೆ. ಆಗಾಗ ವಿಪರೀತ ಹೊಟ್ಟೆನೋವು ಕಾಣಿಸಿಕೊಳ್ಳುತ್ತಿತ್ತು. ವೈದ್ಯರ ಬಳಿ ತೋರಿಸುವಂತೆ ಮನೆಯಲ್ಲಿ ಹೇಳಿದ್ದರೂ ನಾನು ನಿರ್ಲಕ್ಷ್ಯ ಮಾಡಿದ್ದೆ. ನಿನ್ನೆ ಅವತಾರ ಪುರುಷ ಶೂಟಿಂಗ್ ಗೆ ಹೋದಾಗ ಪದೇ ಪದೇ ನೋವು ಕಾಣಿಸಿಕೊಂಡಿತು. ಕೆಲ ಗಂಟೆಗಳಲ್ಲೇ ತಡೆದುಕೊಳ್ಳಲು ಅಸಾಧ್ಯವಾದ ಹೊಟ್ಟೆನೋವು ಅನುಭವಿಸಿದೆ. ಬಳಿಕ ಚಿತ್ರತಂಡದವರೆ ಆಸ್ಪತ್ರೆಗೆ ಕರೆದುಕೊಂಡು ಬಂದರು. ಜೀವನದಲ್ಲಿ ಇಂತಹ ವಿಪರೀತ ನೋವು ಅನುಭವಿಸಿರಲಿಲ್ಲ. ತಡೆದುಕೊಳ್ಳಲಾಗದ ನೋವು ಅನುಭವಿಸಿದೆ ಎಂದು ಹೇಳಿದರು.

ಸ್ಕ್ಯಾನ್ ಮಾಡಿಸಿದಾಗ ಕಿಡ್ನಿ ಸ್ಟೋನ್ ಇದೆ ಎಂದು ಗೊತ್ತಾಗಿದೆ. ವೈದ್ಯರು ಎರಡು ದಿನ ವಿಶ್ರಾಂತಿ ಪಡೆಯಲು ಹೇಳಿದ್ದಾರೆ. ಹೆಚ್ಚು ನೀರು ಕುಡಿಯಲು ಹೇಳಿದ್ದಾರೆ. ಆದರೂ ಕಡಿಮೆಯಾಗಿಲ್ಲವೆಂದರೆ ಸರ್ಜರಿ ಮಾಡಿಸಬೇಕು ಎಂದು ತಿಳಿಸಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...