ಅಮೆರಿಕದ ಫ್ಲೋರಿಡಾದ ವೈದ್ಯರು ಕೊರೊನಾ ವೈರಸ್ ಕಾಯಿಲೆಗೆ ಪರಿಹಾರ ಕಂಡುಕೊಂಡಿದ್ದಾರೆ ಎನ್ನಲಾಗಿದೆ. ಹೊಸ ಚಿಕಿತ್ಸೆಯು ಶೇಕಡಾ 100 ರಷ್ಟು ಯಶಸ್ಸನ್ನು ನೀಡಲಿದೆ ಎಂದು ವೈದ್ಯರು ಹೇಳಿದ್ದಾರೆ. ಯುಎಸ್ ನ ಫ್ಲೋರಿಡಾದ ಅಡ್ವೆನ್ಹೆಲ್ತ್ ಆಸ್ಪತ್ರೆಯ ವೈದ್ಯರು ನಾಲ್ಕು ರೀತಿಯ ಔಷಧಿಗಳನ್ನು ಒಟ್ಟುಗೂಡಿಸಿ ಐಸಿಎಎಂ ಎಂಬ ಔಷಧಿ ತಯಾರಿಸಿದ್ದಾರೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುರಿಯೊಂದಿಗೆ ಈ ಚಿಕಿತ್ಸೆಯನ್ನು ವಿನ್ಯಾಸಗೊಳಿಸಲಾಗಿದೆ.
ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಜೊತೆಗೆ ಶ್ವಾಸಕೋಶವನ್ನು ಉರಿಯೂತದಿಂದ ರಕ್ಷಿಸುತ್ತದೆ. ಪ್ರಸ್ತುತ ಹೊಸ ಚಿಕಿತ್ಸೆಯ ಕ್ಲಿನಿಕಲ್ ಪ್ರಯೋಗವನ್ನು ಪ್ರಾರಂಭಿಸಲಾಗುತ್ತಿದೆ ವೈದ್ಯರು ಸಕಾರಾತ್ಮಕ ಫಲಿತಾಂಶಗಳನ್ನು ನಿರೀಕ್ಷಿಸುತ್ತಿದ್ದಾರೆ.
ಪ್ರಯೋಗದ ಸಮಯದಲ್ಲಿ ಐಸಿಎಎಂ ಚಿಕಿತ್ಸೆಯು ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಸಾಬೀತಾದರೆ, ಕೊರೊನಾ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳದೆ ಐಸಿಎಎಮ್ ಮೂಲಕ ಚಿಕಿತ್ಸೆ ನೀಡಬಹುದು ಎನ್ನಲಾಗಿದೆ. ಶೇಕಡಾ 96.4 ರಷ್ಟು ಕೊರೊನಾ ರೋಗಿಗಳ ಜೀವವನ್ನು ಹೊಸ ಚಿಕಿತ್ಸೆಯ ಮೂಲಕ ಉಳಿಸಬಹುದು. ಸಂಶೋಧಕರು ಏಪ್ರಿಲ್‌ನಿಂದ ಈ ಚಿಕಿತ್ಸೆಯ ಮೇಲೆ ಕೆಲಸ ಮಾಡುತ್ತಿದ್ದಾರೆ.