
ಸಮುದ್ರದಲ್ಲಿ ವಿಹರಿಸುತ್ತಿದ್ದ ಕುಟುಂಬಕ್ಕೆ ಶಾರ್ಕ್ ವೊಂದು ಶಾಕ್ ನೀಡಿದೆ. ಆಂಡ್ರ್ಯೂ ಎಡ್ಡಿ ಕುಟುಂಬ ಸಮೇತ ವಿಹಾರ ದೋಣಿಯಲ್ಲಿ ಕಾಲ ಕಳೆಯುತ್ತಿರುತ್ತಾರೆ. ಗರ್ಭಿಣಿ ಪತ್ನಿ ಮಾರ್ಗೋಟ್ ಡ್ಯೂಕ್ಸ್, ಪೋಷಕರು, ಆಕೆಯ ಸಹೋದರಿ, ಪ್ರಿಯಕರ ಎಲ್ಲರೂ ವಿಹರಿಸುತ್ತಿರುತ್ತಾರೆ.
ಕೆಲ ಕಾಲದ ನಂತರ ಈಜುವುದಕ್ಕಾಗಿ ನೀರಿಗಳಿದ ಆಂಡ್ರ್ಯೂ ಬಳಿಗೆ ಶಾರ್ಕ್ ಬರುತ್ತಿರುವುದನ್ನು ಗಮನಿಸುವುದೇ ಇಲ್ಲ. ಪತ್ನಿ ಡ್ಯೂಕ್ಸ್ ಇದನ್ನು ಗಮನಿಸುವಷ್ಟರಲ್ಲಿ ಶಾರ್ಕ್ ತನ್ನ ಪತಿಯ ಭುಜ ಕಚ್ಚಿರುತ್ತದೆ. ನೀರಲ್ಲಿ ರಕ್ತ ಕಂಡು ಗಾಬರಿಯಾದ ಡ್ಯೂಕ್ಸ್, ತಾನು ಗರ್ಭಿಣಿ ಎನ್ನುವುದನ್ನೂ ಲೆಕ್ಕಕ್ಕಿಡದೆ ನೇರ ಸಮುದ್ರದ ನೀರಿಗೆ ಜಿಗಿದೇ ಬಿಡುತ್ತಾರೆ.
ಅಷ್ಟರಲ್ಲಿ ಅಲ್ಲೇ ವಿಹರಿಸುತ್ತಿದ್ದ ನಾಲ್ಕೈದು ಬೋಟ್ ನಲ್ಲಿದ್ದ ಜನರೂ ಅಲ್ಲಿಗೆ ಬಂದು ಆಂಡ್ರ್ಯೂನನ್ನು ರಕ್ಷಿಸುತ್ತಾರೆ. ಶಾರ್ಕ್ ಏನಿಲ್ಲವೆಂದರೂ 9 ಅಡಿ ಉದ್ದವಿತ್ತು. ಇದೇ ಜಾಗದಲ್ಲಿ ಭಯಾನಕ ಬುಲ್ ಶಾರ್ಕ್ ಸಹ ಕಾಣಿಸಿಕೊಂಡಿತ್ತು.