ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ನೂತನ ಕೃಷಿ ಸುಧಾರಣೆ ಮಸೂದೆ ವಿರುದ್ಧ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದ್ದು, ಎಲ್ಲೆಡೆ ರೈತರು ಪ್ರತಿಭಟನೆಗಿಳಿದಿದ್ದಾರೆ.
ನೂತನ ಮಸೂದೆಯ ಕೃಷಿ ಕ್ಷೇತ್ರದಲ್ಲಿ ಯಾವುದೇ ಸುಧಾರಣೆ ತರುವುದಿಲ್ಲ. ಬದಲಿಗೆ ಇದೊಂದು ರೈತ ವಿರೋಧಿ ಮಸೂದೆ ಎಂದು ಭಾರತೀಯ ರೈತ ಒಕ್ಕೂಟ ಆರೋಪಿಸಿದೆ.
ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳು ಈ ಮಸೂದೆಗೆ ವಿರುದ್ಧವಿದ್ದು, ದಿಲ್ಲಿ-ಅಮೃತ್ ಸರ, ದಿಲ್ಲಿ-ಮೀರತ್, ಕರ್ನಾಟಕ-ತಮಿಳುನಾಡು ಹೆದ್ದಾರಿ ತಡೆದು ಪ್ರತಿಭಟಿಸಿದರು.
ತಮಿಳುನಾಡಿನ ತ್ರಿಚೂರಿನಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಅರೆಬೆತ್ತಲೆ ಪ್ರತಿಭಟನೆ ನಡೆಸಿದ ರೈತರು, ಮಾನವನ ಬುರುಡೆಗಳನ್ನು ಕೈಯಲ್ಲಿ ಹಿಡಿದು, ಕೊರಳಿಗೆ ಮಾಲೆಯಂತೆ ಹಾಕಿಕೊಂಡು ವಿಚಿತ್ರ ಧರಣಿ ನಡೆಸಿದರು.