alex Certify ʼಅದೃಷ್ಟʼ ಅನ್ನೋದು ಈ ರೂಪದಲ್ಲೂ ಬರುತ್ತೆ ನೋಡಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಅದೃಷ್ಟʼ ಅನ್ನೋದು ಈ ರೂಪದಲ್ಲೂ ಬರುತ್ತೆ ನೋಡಿ…!

ಗಾಜೆಂದು ತಿಳಿದುಕೊಂಡ ಹೊಳೆಯುವ ವಸ್ತುವೊಂದು 9.07 ಕ್ಯಾರೆಟ್ ವಜ್ರವೆಂದು ತಿಳಿದ ಬ್ಯಾಂಕ್ ಮ್ಯಾನೇಜರ್‌ ಒಬ್ಬರು ಶಾಕ್ ಆಗಿದ್ದಾರೆ. ಕೆವಿನ್ ಕಿನಾರ್ಡ್ ಹೆಸರಿನ ಈ ವ್ಯಕ್ತಿ ಅರ್ಕಾನ್ಸಾಸ್‌ನ ರಾಜ್ಯ ಉದ್ಯಾನದಲ್ಲಿ ಓಡಾಡುತ್ತಿದ್ದಾಗ ಅವರಿಗೆ ಈ ಅಪರೂಪದ ವಸ್ತು ಸಿಕ್ಕಿದೆ.

ಡೈಮಂಡ್ಸ್‌ ಸ್ಟೇಟ್ ಪಾರ್ಕ್ನ ಕ್ರೇಟರ್‌ನಲ್ಲಿ ಕಳೆದ 48 ವರ್ಷಗಳಲ್ಲಿ ಸಿಕ್ಕಿದ ಎರಡನೇ ಅತಿ ದೊಡ್ಡ ವಜ್ರ ಇದಾಗಿದೆ. ಬಾಲ್ಯದಿಂದಲೂ ಈ ಕುಳಿಗೆ ಭೇಟಿ ನೀಡುತ್ತಲೇ ಬಂದಿರುವ ಕಿನಾರ್ಡ್, ಈ ಹಿಂದೆ ಎಂದೂ ಸಹ ವಜ್ರವೊಂದನ್ನು ಕಂಡಿದ್ದಿಲ್ಲ.

ಗೋಲಿಯಷ್ಟು ಗಾತ್ರದಲ್ಲಿರುವ ಕ್ರಿಸ್ಟಲ್ ಒಂದನ್ನು ಕಂಡ ಕಿನಾರ್ಡ್ ಪಾರ್ಕ್ ಬಳಿ ಇರುವ ವಜ್ರ ಶೋಧನಾ ಕೇಂದ್ರದ ಬಳಿ ಅದು ವಜ್ರವೆಂದು ಖಾತ್ರಿ ಪಡಿಸಿಕೊಂಡಿದ್ದಾರೆ.

ಇದುವರೆಗೂ ಈ ಉದ್ಯಾನದಲ್ಲಿ 264 ವಜ್ರಗಳು ಪತ್ತೆಯಾಗಿದ್ದು, ಒಟ್ಟಾರೆ 59.25 ಕ್ಯಾರಟ್‌ನಷ್ಟು ತೂಗುತ್ತವೆ. ಇಲ್ಲಿಗೆ ಭೇಟಿ ನೀಡುವ ಮಂದಿಗೆ ಆಗಾಗ ವ್ರಜದ ಹರಳುಗಳು ಸಿಗುತ್ತಲೇ ಇರುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...