ಪಾಟ್ನಾದ ಏಮ್ಸ್ ನಲ್ಲಿ ಕೆಲಸ ಮಾಡುವ ವಿಚ್ಛೇದಿತ ಮಹಿಳೆ ಮೇಲೆ ಅತ್ಯಾಚಾರ ನಡೆದಿದೆ. ಆಕೆ ಆಸ್ತಿ ಮೇಲೆ ಕಣ್ಣಿಟ್ಟಿದ್ದ ಯುವಕನೊಬ್ಬ ಕಳೆದ 8 ವರ್ಷಗಳಿಂದ ಹಿಂಸೆ ನೀಡ್ತಿದ್ದನಂತೆ. ಮಗನ ಹತ್ಯೆ ಮಾಡುವುದಾಗಿ ಬೆದರಿಸಿ ಅತ್ಯಾಚಾರವೆಸಗುತ್ತಿದ್ದನಂತೆ.
ಎರಡು ತಿಂಗಳ ಹಿಂದೆ ಮದುವೆ ಮಾಡಿಕೊಳ್ಳುವಂತೆ ಬೇಡಿಕೆಯಿಟ್ಟಿದ್ದ ಎನ್ನಲಾಗಿದೆ. ಇದನ್ನು ಮಹಿಳೆ ನಿರಾಕರಿಸಿದ್ದಳಂತೆ. ಇದ್ರಿಂದ ಮತ್ತಷ್ಟು ಕೋಪಗೊಂಡಿದ್ದ ಯುವಕ ಮಹಿಳೆಯನ್ನು ರಾಂಚಿ ಹೊಟೇಲ್ ಗೆ ಕರೆತಂದು ಅಲ್ಲಿಯೂ ಅತ್ಯಾಚಾರವೆಸಗಿದ್ದನಂತೆ.
ಮಹಿಳೆ ಹಣದಲ್ಲಿ ಮೋಜು ಮಸ್ತಿ ಮಾಡ್ತಿದ್ದನಂತೆ. ಮಗನಿಗೆ ಮನಸ್ಸಿಗೆ ಬಂದಂತೆ ಥಳಿಸಿ ಆಕೆಯಿಂದ ಎಟಿಎಂ ಕಾರ್ಡ್ ಪಡೆದಿದ್ದನಂತೆ. ಪ್ರತಿ ದಿನ ಮನೆಗೆ ಬಂದು ಹಿಂಸೆ ನೀಡ್ತಿದ್ದವನ ವಿರುದ್ಧ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.