ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆ ವೇಳೆ ಡ್ರಗ್ಸ್ ಪ್ರಕರಣ ಹೊರಬಿದ್ದಿದೆ. ಈಗಾಗಲೇ ಬಾಲಿವುಡ್ ನ ಅನೇಕರ ವಿಚಾರಣೆ ನಡೆಯುತ್ತಿದೆ.
ರಿಯಾ ಬಂಧನವಾಗ್ತಿದ್ದಂತೆ ಕೆಲ ಕಲಾವಿದರಿಗೆ ಎನ್ ಸಿಬಿ ನೊಟೀಸ್ ನೀಡಿದೆ. ಇಂದು ರಕುಲ್ ಪ್ರೀತ್ ಸಿಂಗ್ ವಿಚಾರಣೆ ನಡೆದಿದೆ. ವಿಚಾರಣೆ ವೇಳೆ ಅನೇಕ ಸಂಗತಿಗಳು ಹೊರಗೆ ಬಂದಿವೆ ಎನ್ನಲಾಗಿದೆ. ಡ್ರಗ್ಸ್ ಬಗ್ಗೆ ಮಾತನಾಡಲು ಬಳಸುತ್ತಿದ್ದ ವಾಟ್ಸ್ ಅಪ್ ಗ್ರೂಪ್ ಅಡ್ಮಿನ್ ದೀಪಿಕಾ ಪಡುಕೋಣೆ ಎಂಬುದು ಗೊತ್ತಾಗಿದೆ.
ಎನ್ಸಿಬಿ ಮೂಲಗಳ ಮಾಹಿತಿಯ ಪ್ರಕಾರ, ಈ ಗ್ರೂಪ್ 2017 ರಲ್ಲಿ ರಚಿಸಲಾಗಿತ್ತು. ಈ ಗ್ರೂಪ್ ನಲ್ಲಿ ದೀಪಿಕಾ, ಜಯ ಶಾ ಮತ್ತು ಕರಿಷ್ಮಾ ಪ್ರಕಾಶ್ ಇದ್ದಾರೆ. ಈ ಗ್ರೂಪ್ ಮೂಲಕವೇ ದೀಪಿಕಾ ಮತ್ತು ಕರಿಷ್ಮಾ ಡ್ರಗ್ಸ್ ಬಗ್ಗೆ ಮಾತನಾಡುತ್ತಿದ್ದರು ಎನ್ನಲಾಗಿದೆ.
ಮತ್ತೊಂದೆಡೆ, ರಕುಲ್ ಪ್ರೀತ್ ಸಿಂಗ್ 2018 ರಲ್ಲಿ ರಿಯಾ ಜೊತೆ ಡ್ರಗ್ಸ್ ಚಾಟ್ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ರಿಯಾ ಚಕ್ರವರ್ತಿಯೊಂದಿಗೆ ಡ್ರಗ್ ಚಾಟ್ ಮಾಡಿದ್ದೆ ಎಂದು ಎನ್ ಸಿಬಿಗೆ ತಿಳಿಸಿದ್ದಾರಂತೆ. ಆದ್ರೆ ಡ್ರಗ್ಸ್ ತೆಗೆದುಕೊಂಡಿಲ್ಲವೆಂದು ರಕುಲ್ ಪ್ರೀತ್ ಸಿಂಗ್ ಹೇಳಿದ್ದಾರೆ.
ರಿಯಾ ಚಕ್ರವರ್ತಿ ಬಂಧನದ ನಂತರ, ಎನ್ಸಿಬಿ ನಟಿ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್ ಮತ್ತು ಶ್ರದ್ಧಾ ಕಪೂರ್ ಗೆ ವಿಚಾರಣೆಗಾಗಿ ಸಮನ್ಸ್ ನೀಡಿದೆ.