ದುಬೈನಲ್ಲಿ ಗುರುವಾರ ನಡೆದ ಐಪಿಎಲ್ ನ 6 ನೇ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.
ಮೊದಲು ಬ್ಯಾಟಿಂಗ್ ಮಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಮಯಾಂಕ್ ಅಗರ್ವಾಲ್ 26 ರನ್ ಗಳಿಸಿ ಔಟಾದರು. ನಂತರ ಕೆ.ಎಲ್. ರಾಹುಲ್ ಗೆ ಜೊತೆಯಾದ ನಿಕೋಲಸ್ ಪೂರನ್ ಕೂಡ 17ರನ್ ಗಳಿಸಿ ಔಟಾಗಿದ್ದು, ಕೊನೆಯ ಹಂತದವರೆಗೂ ಅಜೇಯರಾಗಿ ಉಳಿದ ನಾಯಕ ಕೆ.ಎಲ್. ರಾಹುಲ್ ಶತಕ ಗಳಿಸಿದರು. 69 ಎಸೆತಗಳಲ್ಲಿ (132)ರನ್ ಇವರ ಈ ಸ್ಪೋಟಕ ಇನ್ನಿಂಗ್ಸ್‌ನಲ್ಲಿ 7 ಸಿಕ್ಸರ್ ಹಾಗೂ 14 ಬೌಂಡರಿಗಳಿದ್ದವು. ಈ ಮೂಲಕ ಕಿಂಗ್ಸ್ ಇಲೆವೆನ್ ಪಂಜಾಬ್ 206 ರನ್ ಗಳ ಬೃಹತ್ ಮೊತ್ತ ದಾಖಲಿಸಿತು.
ಗುರಿ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆರಂಭದಲ್ಲಿ ದೇವದತ್ ಪಡಿಕಲ್ ಕೇವಲ 1 ರನ್ ಗಳಿಸಿ ಕೋಟ್ರೆಲ್ ಅವರ ಬೌಲಿಂಗ್ ನಲ್ಲಿ ಔಟಾದರು. ನಾಯಕ ವಿರಾಟ್ ಕೊಹ್ಲಿ ಕೇವಲ 1ರನ್ ಗೆ ಔಟಾದರು. ಸತತ ವಿಕೇಟ್ ಗಳನ್ನು ಕಳೆದುಕೊಂಡು ಆಘಾತದಲ್ಲಿದ್ದ ಆರ್.ಸಿ.ಬಿ. ತಂಡಕ್ಕೆ ಎಬಿ ಡಿವಿಲಿಯರ್ಸ್ ಹಾಗೂ ಆರೊನ್ ಫಿಂಚ್ ಆಸರೆಯಾಗಿದ್ದು, ಆದರೆ ಬಹಳ ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. ಆರೊನ್ ಫಿಂಚ್ 20 ರನ್ ಗಳಿಸಿ ಔಟಾದರೆ ಎಬಿ ಡಿವಿಲಿಯರ್ಸ್ ಕೂಡ 28 ರನ್ ಗಳಿಸಿ ಔಟಾದರು. ಆರ್.ಸಿ.ಬಿ. ತಂಡ 17 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 109 ರನ್ ಗಳಿಸಿ ಸೋಲಿಗೆ ಶರಣಾಯಿತು. ಈ ಮೂಲಕ ಪಂಜಾಬ್ ಕಿಂಗ್ಸ್ ಇಲೆವೆನ್ 97 ರನ್ ಗಳಿಂದ ಭರ್ಜರಿ ಜಯ ಸಾಧಿಸಿತು.