ಕೃಷಿಕರಿಗೆ ಸಿಎಸಿಪಿ ನೆಮ್ಮದಿ ಸುದ್ದಿಯೊಂದನ್ನು ನೀಡಿದೆ. ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಹೊರತುಪಡಿಸಿ ರೈತರಿಗೆ 5 ಸಾವಿರ ರೂಪಾಯಿಗಳನ್ನು ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ರಸಗೊಬ್ಬರ ಸಬ್ಸಿಡಿಯಾಗಿ ರೈತರಿಗೆ ಪ್ರತಿ ವರ್ಷ 5,000 ರೂಪಾಯಿ ನಗದು ಸಹಾಯಧನವನ್ನು ನೀಡಬೇಕು ಎಂದು ಆಯೋಗ ಹೇಳಿದೆ.
ಈ ಮೊತ್ತವನ್ನು ಎರಡು ಬಾರಿ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಬಹುದು ಎಂದು ಆಯೋಗ ಶಿಫಾರಸು ಮಾಡಿದೆ. ಇದರ ಅಡಿಯಲ್ಲಿ ಖಾರಿಫ್ ಬೆಳೆಗಳಲ್ಲಿ 2,500 ರೂಪಾಯಿ ಮತ್ತು ರಬಿ ಬೆಳೆ ಋತುವಿನಲ್ಲಿ 2,500 ರೂಪಾಯಿ ನೀಡಲಿದೆ.
ರೈತರಿಗೆ ಪಿಎಂ ಸಮ್ಮಾನ್ ನಿಧಿ ಅಡಿ ವಾರ್ಷಿಕವಾಗಿ 6,000 ರೂಪಾಯಿಗಳ ಜೊತೆಗೆ 5,000 ರೂಪಾಯಿಗಳ ರಸಗೊಬ್ಬರ ಸಬ್ಸಿಡಿ ಕೂಡ ನೇರವಾಗಿ ಬ್ಯಾಂಕ್ ಖಾತೆ ಸೇರಲಿದೆ. ರಸಗೊಬ್ಬರ ಸಬ್ಸಿಡಿಯನ್ನು ನೇರವಾಗಿ ರೈತರ ಖಾತೆಗೆ ಹಾಕಿದ್ರೆ, ಕೇಂದ್ರ ಸರ್ಕಾರವು ಅಗ್ಗದ ರಸಗೊಬ್ಬರ ಮಾರಾಟ ಮಾಡುವ ಕಂಪನಿಗಳಿಗೆ ನೀಡುವ ಸಬ್ಸಿಡಿಯನ್ನು ಕೊನೆಗೊಳಿಸಲಿದೆ.
ಸರ್ಕಾರ ಪ್ರಸ್ತುತ ಮೂರು ಬಾರಿ ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ರೈತರಿಗೆ 2000-2000 ರೂಪಾಯಿಗಳನ್ನು ನೀಡುತ್ತದೆ. ಈ ಯೋಜನೆಯಲ್ಲಿ ಈವರೆಗೆ 9 ಕೋಟಿ ರೈತರು ಹೆಸರು ನೋಂದಾಯಿಸಿಕೊಂಡಿದ್ದಾರೆ.