ಝೂಮ್ ಮೀಟಿಂಗ್ ಸಂದರ್ಭದಲ್ಲಿ ಭಾಗಿಯಾಗಿರುವಂತೆ ಕಾಣಿಸಿಕೊಳ್ಳಲು ನಾಟಕ ಮಾಡಿದ ಮೆಕ್ಸಿಕೋದ ರಾಜಕಾರಣಿಯೊಬ್ಬರು ಭಾರೀ ಸದ್ದು ಮಾಡುತ್ತಿದ್ದಾರೆ.
ಮೆಕ್ಸಿಕೋ ಕಾಂಗ್ರೆಸ್ ನ ರಿಮೋಟ್ ಮೀಟಿಂಗ್ ಒಂದರಲ್ಲಿ ಭಾಗಿಯಾಗಿದ್ದ ವ್ಯಾಲೆಂಟೀನಾ ಬ್ಯಾಟ್ರೆಸ್ ಗ್ವಡ್ಡಾರ್ರಾಮಾಗೆ ಯಾಕೋ ಮೀಟಿಂಗ್ ಬಲೇ ಬೋರ್ ಎನಿಸತೊಡಗಿತು. ಹಾಗಾಗಿ, ತಮ್ಮ ಹಾಜರಾತಿಯನ್ನು ಖಾತ್ರಿಪಡಿಸಲು ತಂತ್ರವೊಂದನ್ನು ಹೂಡಿದ್ದಾರೆ ವ್ಯಾಲೆಂಟಿನಾ.
ಇಲ್ಲಿನ National Regeneration Movementನ ಸದಸ್ಯೆಯಾದ ವ್ಯಾಲೆಂಟಿನಾ, ಝೂಮ್ ಮೀಟಿಂಗ್ ಲೈವ್ ಇದ್ದಾಗಲೇ ತಮ್ಮದೊಂದು ಫೋಟೋವನ್ನು ಕಂಪ್ಯೂಟರ್ನ ವೆಬ್ ಕ್ಯಾಮೆರಾ ನೇರಕ್ಕೆ ಇಟ್ಟು, ಮೀಟಿಂಗ್ನಲ್ಲಿ ಹಾಜರಿರುವಂತೆ ತೋರಿಸಿಕೊಳ್ಳಲು ನೋಡಿದ್ದಾರೆ. ಆದರೆ ಈ ಸಂಬಂಧ ತಮ್ಮ ಪ್ಲಾನ್ ಅನ್ನು ಸರಿಯಾಗಿ ಅನುಷ್ಠಾನಕ್ಕೆ ತಾರದ ವ್ಯಾಲೆಂಟಿನಾ, ಇದೇ ಕಾಲ್ನಲ್ಲಿ ಸಿಕ್ಕಿಬಿದ್ದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದಾರೆ.
https://twitter.com/jorgegavino/status/1307336663732023303?ref_src=twsrc%5Etfw%7Ctwcamp%5Etweetembed%7Ctwterm%5E1307336663732023303%7Ctwgr%5Eshare_3&ref_url=https%3A%2F%2Fwww.timesnownews.com%2Fthe-buzz%2Farticle%2Fpolitician-sneaks-out-of-zoom-meeting-by-placing-her-own-photograph-on-camera-watch%2F656757