ಕೇಂದ್ರ ರಾಜ್ಯ ರೈಲ್ವೇ ಸಚಿವ ಹಾಗೂ ಬೆಳಗಾವಿ ಸಂಸದರಾಗಿದ್ದ ಸುರೇಶ್ ಅಂಗಡಿ ಇಂದು ವಿಧಿವಶರಾಗಿದ್ದು, ಅವರ ಹಠಾತ್ ನಿಧನ ರಾಜ್ಯದ ರಾಜಕಾರಣಿಗಳನ್ನು ಬೆಚ್ಚಿಬೀಳಿಸಿದೆ.
ಯಾವುದೇ ದುರಭ್ಯಾಸಗಳಿಲ್ಲದ ಸುರೇಶ್ ಅಂಗಡಿಯವರು ಕೊರೊನಾ ಸೋಂಕಿಗೆ ತುತ್ತಾದ ಹಿನ್ನಲೆಯಲ್ಲಿ ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಗೆ ದಾಖಲಾಗಿದ್ದರು.
ತಮಗೆ ಕೊರೊನಾ ಸೋಂಕು ತಗುಲಿದ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಅವರು, ನನಗೆ ಯಾವುದೇ ರೋಗ ಲಕ್ಷಣಗಳಿಲ್ಲವಾದರೂ ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಗ ದಾಖಲಾಗಿರುವುದಾಗಿ ತಿಳಿಸಿದ್ದರು.
ಇನ್ನೇನು ಅವರು ಗುಣಮುಖರಾಗಿ ಹೊರ ಬರುತ್ತಾರೆಂದು ಭಾವಿಸಲಾಗಿರುವುದರ ಮಧ್ಯೆ ನಡೆದಿರುವ ಈ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ.