
ಕೊರೊನಾ ಸಮಯದಲ್ಲಿ ಒಂದು ಹೊತ್ತಿನ ಊಟಕ್ಕೆ ಪರದಾಡುತ್ತಿದ್ದ ಕುಟುಂಬದ ಅದೃಷ್ಟ ರಾತ್ರೋರಾತ್ರಿ ಬದಲಾಗಿದೆ. ಕೊಚ್ಚಿಯ 24 ವರ್ಷದ ಅನಂತು ಎಂಬಾತ ದೇವಸ್ಥಾನದಲ್ಲಿ ಕ್ಲರ್ಕ್ ಕೆಲಸ ಮಾಡ್ತಿದ್ದ. ಕೊರೊನಾ ಸಂದರ್ಭದಲ್ಲಿ ದೇವಸ್ಥಾನಗಳ ಬಾಗಿಲು ಮುಚ್ಚಿದ್ದು, ಜೀವನ ನಿರ್ವಹಣೆ ಕಷ್ಟವಾಗಿತ್ತು.
ಅನಂತು ಓಣಂ ಬಂಪರ್ ಲಾಟರಿ ಖರೀದಿ ಮಾಡಿದ್ದ. 300 ರೂಪಾಯಿ ಲಾಟರಿ ಈತನ ಅದೃಷ್ಟ ಬದಲಿಸಿದೆ. 12 ಕೋಟಿ ರೂಪಾಯಿ ಲಾಟರಿ ಹೊಡೆದಿದೆ. ಟ್ಯಾಕ್ಸ್ ಕಳೆದು 7.5 ಕೋಟಿ ರೂಪಾಯಿ ಅನಂತು ಕೈ ಸೇರಲಿದೆ.
ಅನಂತು ತಂದೆ ಪೇಂಟರ್ ಕೆಲಸ ಮಾಡ್ತಾರಂತೆ. ಕೊರೊನಾದಲ್ಲಿ ಅವರಿಗೂ ಕೆಲಸವಿರಲಿಲ್ಲವಂತೆ. ಕೇರಳ ಸರ್ಕಾರ ಓಣಂ ಲಾಟರಿ ಘೋಷಣೆಯನ್ನು ಭಾನುವಾರ ಮಾಡಿತ್ತು. ನನಗೆ ಲಾಟರಿ ಹೊಡೆದಿರುವ ಸುದ್ದಿಯನ್ನು ನಂಬಲು ಸಾಧ್ಯವಾಗ್ತಿಲ್ಲವೆಂದು ಅನಂತು ಹೇಳಿದ್ದಾನೆ.