ಜಿಯೋ ತನ್ನ ಗ್ರಾಹಕರಿಗೆ ಅನೇಕ ಅಗ್ಗದ ಪ್ಲಾನ್ ನೀಡ್ತಿದೆ. ಜಿಯೋ ಕಡಿಮೆ ಬೆಲೆಗೆ ಹೆಚ್ಚಿನ ಡೇಟಾ ಕೂಡ ನೀಡ್ತಿದೆ. ಕಂಪನಿ ಗ್ರಾಹಕರ ಅನುಕೂಲಕ್ಕಾಗಿ 3ಜಿಬಿ ಡೇಟಾವನ್ನು ಪ್ರತಿ ದಿನ ನೀಡ್ತಿದೆ.
ಜಿಯೋದ 401 ರೂಪಾಯಿ ಯೋಜನೆ 28 ದಿನಗಳ ಸಿಂಧುತ್ವ ಹೊಂದಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 3 ಜಿಬಿ ಡೇಟಾ ಮತ್ತು 6 ಜಿಬಿ ಡೇಟಾ ಸಿಗ್ತಿದೆ. ಗ್ರಾಹಕರು ಈ ಯೋಜನೆಯಲ್ಲಿ ಒಟ್ಟು 90ಜಿಬಿ ಡೇಟಾವನ್ನು ಪಡೆಯುತ್ತಾರೆ. ಈ ಯೋಜನೆಯಲ್ಲಿ, ಕಂಪನಿಯು ಆನ್-ನೆಟ್ ಉಚಿತ ಕರೆ ಮತ್ತು ಆಫ್-ನೆಟ್ ಕರೆಗಾಗಿ 1000 ನಿಮಿಷಗಳನ್ನು ನೀಡುತ್ತದೆ.
ಈ ಪ್ಲಾನ್ ನಲ್ಲಿ ಜಿಯೋ ಗ್ರಾಹಕರಿಗೆ ಪ್ರತಿದಿನ 100 ಎಸ್ಎಂಎಸ್ ಮತ್ತು ಜಿಯೋ ಅಪ್ಲಿಕೇಶನ್ಗಳ ಉಚಿತ ಚಂದಾದಾರಿಕೆಯನ್ನು ಸಹ ನೀಡಲಾಗುತ್ತದೆ. ಈ ಯೋಜನೆಯಲ್ಲಿ ಡಿಸ್ನಿ ಪ್ಲಸ್ ಹಾಟ್ಸ್ಟಾರ್ ವಿಐಪಿಯ ಚಂದಾದಾರಿಕೆಯನ್ನು 1 ವರ್ಷಕ್ಕೆ ನೀಡಲಾಗುತ್ತದೆ.
ಜಿಯೋದ 999 ರೂಪಾಯಿ ಯೋಜನೆಯಲ್ಲೂ ಪ್ರತಿದಿನ ಗ್ರಾಹಕರಿಗೆ 3 ಜಿಬಿ ಡೇಟಾ ಸಿಗ್ತಿದೆ. ಜಿಯೋನ ಈ ಯೋಜನೆ 84 ದಿನಗಳ ಸಿಂಧುತ್ವ ಹೊಂದಿದೆ. ಗ್ರಾಹಕರು ಒಟ್ಟು 252 ಜಿಬಿ ಡೇಟಾವನ್ನು ಪಡೆಯುತ್ತಾರೆ. ಈ ಯೋಜನೆಯಲ್ಲಿ ಗ್ರಾಹಕರು ಆನ್-ನೆಟ್ ಉಚಿತ ಕರೆ, ಆಫ್-ನೆಟ್ ಕರೆ ಮಾಡಲು 3000 ನಿಮಿಷಗಳು ಮತ್ತು ಪ್ರತಿದಿನ 100 ಎಸ್ಎಂಎಸ್ ಮತ್ತು ಜಿಯೋ ಅಪ್ಲಿಕೇಶನ್ಗಳ ಪೂರಕ ಚಂದಾದಾರಿಕೆಯನ್ನು ಸಹ ಪಡೆಯುತ್ತಾರೆ.
349 ರೂಪಾಯಿ ಯೋಜನೆ 28 ದಿನಗಳ ಮಾನ್ಯತೆ ಹೊಂದಿದೆ. ಇದ್ರಲ್ಲೂ ಪ್ರತಿದಿನ 3 ಜಿಬಿ ಡೇಟಾ ಸಿಗಲಿದೆ. ಗ್ರಾಹಕರಿಗೆ ಒಟ್ಟು 84 ಜಿಬಿ ಡೇಟಾ ಸಿಗ್ತಿದೆ. ದಿನಕ್ಕೆ 100 ಎಸ್ಎಂಎಸ್ ಮತ್ತು ಲೈವ್ ಅಪ್ಲಿಕೇಶನ್ಗಳ ಉಚಿತ ಚಂದಾದಾರಿಕೆ ಸಿಗ್ತಿದೆ.