ಕಳೆದ ಕೆಲವು ವರ್ಷಗಳಿಂದ ವಾಟ್ಸಾಪ್ ಬಳಕೆದಾರರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಲೇ ಇದೆ. ಅದರಲ್ಲೂ ಇಂದಿನ ಜನರೇಷನ್ ಅಂತೂ ವಾಟ್ಸಾಪ್ ಇಲ್ಲದೆ ಇರೋದಿಲ್ಲ. ಹೀಗಾಗಿ ತನ್ನ ಬಳಕೆದಾರರಿಗೆ. ವಿಶೇಷವಾದ ಹಾಗೂ ವಿಭಿನ್ನವಾದ ವೈಶಿಷ್ಟ್ಯಗಳನ್ನು ನೀಡುತ್ತಲೇ ಇದೆ. ಇದೀಗ ತನ್ನ ಬಳಕೆದಾರರಿಗೆ ಮತ್ತೊಂದು ವೈಶಿಷ್ಟ್ಯವನ್ನು ಬಿಡುಗೊಳಿಸುತ್ತಿದೆ.
ಹೌದು, ಇನ್ಮುಂದೆ ಸ್ವಯಂಚಾಲಿತವಾಗಿ ವಿಡಿಯೋ ಹಾಗೂ ಫೋಟೋಗಳು ಡಿಲೀಟ್ ಆಗಲಿವೆ. ಎಕ್ಸ್‌ಪೈರಿಂಗ್ ಮೆಸೇಜ್ ಎಂಬ ವೈಶಿಷ್ಟ್ಯದ ಬಗ್ಗೆ ವಾಟ್ಸಾಪ್ ಬಹಿರಂಗಗೊಳಿಸಿದೆ. 2. 20. 201. 1 ಬೀಟಾ ಆವೃತ್ತಿಯನ್ನು ಇತ್ತೀಚೆಗೆ ಆಂಡ್ರಾಯ್ಡ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಇನ್ನು ಇಷ್ಟು ದಿನ ಒಂದು ಬಾರಿ ಮೆಸೇಜ್ ಬಂದು ಹೋದರೆ ದಿ ಮೀಡಿಯಾ ಎಕ್ಸ್ಪೈಯರ್ ಎಂದು ತೋರಿಸುತ್ತಿತ್ತು. ಆದರೆ ಇನ್ಮುಂದೆ ಹಾಗೆ ತೋರಿಸುವುದಿಲ್ಲ. ಅದರ ಬದಲು ಬೇರೆ ರೀತಿಯಲ್ಲಿ ತೋರಿಸುತ್ತದೆ. ಇದರಿಂದ ನೀವು ಡಿಲೀಟ್ ಆಗಿರುವುದನ್ನು ತಿಳಿಯಬಹುದಾಗಿದೆ.
ಒಟ್ನಲ್ಲಿ ಒಂದಲ್ಲ ಒಂದು ವಿಶೇಷತೆಗಳೊಂದಿಗೆ ತನ್ನ ಬಳಕೆದಾರರಿಗೆ ವಾಟ್ಸಾಪ್ ಹತ್ತಿರವಾಗಿದೆ. ಇನ್ನೂ ಏನಾದರೂ ಹೊಸದು ತರಬೇಕೆಂಬ ಆಲೋಚನೆಯಲ್ಲಿಯೇ ಈ ವೈಶಿಷ್ಟ್ಯ ಪರಿಚಯಿಸಿದೆ.