ಸಂಗೀತ ಎಲ್ಲೆಲ್ಲಿ ಹುಟ್ಟಬಹುದು ? ಪ್ರತಿ ವಸ್ತುವಿನ ಶಬ್ದದಲ್ಲೂ ಸಂಗೀತ ಹುಟ್ಟಬಲ್ಲದು. ಆದರೆ, ಅದಕ್ಕೊಂದು ಲಯ ಬೇಕಷ್ಟೆ.
ಪ್ರಸಿದ್ಧ ಯೂಟ್ಯೂಬರ್ ಕುರ್ತ್ ಹ್ಯುಗೊ, ವಾಲ್ ಮಾರ್ಟ್ ವೊಂದರಲ್ಲಿ ಸಿಕ್ಕ ಶಬ್ದಗಳನ್ನೇ ಬಳಸಿ ಕೊರಿಯನ್ ಪಾಪ್ ಸಮೂಹ ಸೃಷ್ಟಿಸಿದ್ದ ಡೈನಮೈಟ್ ಆಲ್ಬಮ್ ನ್ನೇ ಮರು ಸೃಷ್ಟಿ ಮಾಡಿದ್ದಾರೆ.
ವಾಲ್ ಮಾರ್ಟ್ ವೊಂದಕ್ಕೆ ಭೇಟಿ ನೀಡುವ ಕುರ್ತ್ ಹ್ಯುಗೊ, ಅಲ್ಲಿರುವ ರೆಫ್ರಜರೇಟರ್ ಬಾಗಿಲು ತೆರೆಯುವುದು, ಬೊಂಬೆಗಳಿಗೆ ಕೀ ಕೊಟ್ಟು ಅದರಿಂದ ಬರುವ ಶಬ್ದವನ್ನು ರೆಕಾರ್ಡ್ ಮಾಡಿಕೊಳ್ಳುವುದು, ಬ್ಯಾಸ್ಕೆಟ್ ಬಾಲ್ ನ್ನು ನೆಲಕ್ಕೆ ಕುಟ್ಟಿ ಬಂದ ಶಬ್ದ, ಹ್ಯಾಂಗರ್ ಅಲ್ಲಾಡಿಸಿದಾಗ ಬರುವ ಶಬ್ದ, ಬಿಲ್ ಪಾವತಿಸುವಾಗ ಸ್ಕ್ಯಾನರ್ ಶಬ್ದ……ಹೀಗೆ ವಿವಿಧ ವಸ್ತುಗಳಿಂದ ಜನಿತವಾದ ಸಪ್ಪಳವನ್ನೇ ಸಂಗೀತಕ್ಕೆ ಬಳಸಿದ್ದು ವಿಶೇಷ.