ಕಾವೇರಿ ತೀಥೋ೯ಧ್ಬವದ ಕುರಿತು ಮಹತ್ವದ ಮಾಹಿತಿ ಇಲ್ಲಿದೆ. ಅಕ್ಟೋಬರ್ 17 ರ ಶನಿವಾರ ಬೆಳಗ್ಗೆ 7.03 ನಿಮಿಷಕ್ಕೆ ಸಲ್ಲುವ ಕನ್ಯಾ ಲಗ್ನದಲ್ಲಿ ಶ್ರೀ ಮೂಲಕಾವೇರಿ ತೀಥೋ೯ಧ್ಬವವಾಗಲಿದೆ.
ಸೆಪ್ಟೆಂಬರ್ 26 ರಂದು ಬೆಳಗ್ಗೆ 8.31 ಕ್ಕೆ ಸಲ್ಲುವ ತುಲಾಲಗ್ನದಲ್ಲಿ ಪತ್ತಾಯಕ್ಕೆ ಅಕ್ಕಿ ಹಾಕಲಾಗುತ್ತದೆ. ಅಕ್ಟೋಬರ್ 4 ರಂದು ಬೆಳಗ್ಗೆ 10.33 ಗಂಟೆಗೆ ಸಲ್ಲುವ ವೖಶ್ಚಿಕ ಲಗ್ನದಲ್ಲಿ ಆಜ್ಞಾ ಮುಹೂತ೯ ನೆರವೇರಿಸಲಾಗುತ್ತದೆ.
ಅಕ್ಟೋಬರ್ 14 ರಂದು ಬೆಳಗ್ಗೆ 11.45 ಗಂಟೆಗೆ ಸಲ್ಲುವ ಧನುರ್ ಲಗ್ನದಲ್ಲಿ ಅಕ್ಷಯ ಪಾತ್ರೆ ಇರಿಸಲಾಗುತ್ತಿದ್ದು, ಅಕ್ಟೋಬರ್ 14 ರಂದು ಸಾಯಂಕಾಲ 5.15 ನಿಮಿಷಕ್ಕೆ ಸಲ್ಲುವ ಮೀನಾ ಲಗ್ನದಲ್ಲಿ ಕಾಣಿಕೆ ಡಬ್ಬಿಗಳನ್ನು ಇರಿಸಲಾಗುತ್ತದೆ.
ಅಕ್ಟೋಬರ್ 17 ರಂದು ಶನಿವಾರ ಬೆಳಗ್ಗೆ 7.03 ನಿಮಿಷಕ್ಕೆ ಸಲ್ಲುವ ಕನ್ಯಾ ಲಗ್ನದಲ್ಲಿ ಶ್ರೀ ಮೂಲಕಾವೇರಿ ತೀಥೋ೯ಧ್ಬವದ ಪುಣ್ಯ ಕಾಯ೯ ನೆರವೇರಲಿದೆ ಎಂದು ಶ್ರೀ ತಲಕಾವೇರಿ ಭಾಗಮಂಡಲ ದೇವಾಲಯದ ಕಾಯ೯ನಿವಾ೯ಹಕ ಅಧಿಕಾರಿ ಮಾಹಿತಿ ನೀಡಿದ್ದಾರೆ.