ಇಷ್ಟು ವರ್ಷ ನೌಕರರು ಖಾಸಗಿ ಕಂಪನಿಯಲ್ಲಿ 5 ವರ್ಷ ಪೂರೈಸಿದರೆ ಮಾತ್ರ ಅವರಿಗೆ ಗ್ರಾಚ್ಯುಟಿ ಸೌಲಭ್ಯ ಪಡೆಯಲು ಅರ್ಹರಾಗುತ್ತಿದ್ದರು. ಆದರೆ ಇದೀಗ ಒಂದು ವರ್ಷ ಪೂರೈಸಿದರೆ ಸಾಕು ಅವರು ಕೂಡ ಗ್ರಾಚ್ಯುಟಿ ಪಡೆಯಲು ಅರ್ಹರಾಗುತ್ತಾರೆ. ಇಂತಹದೊಂದು ಮಸೂದೆಯನ್ನು ಕೇಂದ್ರ ಸರ್ಕಾರ ಅಧಿವೇಶನದಲ್ಲಿ ಇಡಲಾಗಿದೆ.
ಕಾರ್ಮಿಕ ಸುಧಾರಣೆಗೆ ಸಂಬಂಧಿಸಿದಂತೆ ಮೂರು ಮಸೂದೆಗಳನ್ನು ಸಂಸತ್ತಿನ ಮಾನ್ಸೂನ್ ಅಧಿವೇಶನ ಮುಂದೆ ಇಡಲಾಗಿದ್ದು, ಅದರಲ್ಲಿ ಗ್ರಾಚ್ಯುಟಿ ಕೂಡ ಒಂದು. ಈ ಮಸೂದೆಗಳು ಇನ್ನೂ ಅಂಗೀಕಾರ ಆಗಿಲ್ಲ. ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರ ಸಿಗಬೇಕಾಗಿದೆ. ಅಂಗೀಕಾರ ಆದ ನಂತರ ಇದು ಜಾರಿಗೆ ಬರಲಿದೆ.
ಇನ್ನು ಈ ಮಸೂದೆಯಿಂದ ಕಾರ್ಮಿಕರಿಗೆ ತುಂಬಾ ಅನುಕೂಲ ಆಗಲಿದೆ. ಅದರಲ್ಲೂ ಗುತ್ತಿಗೆ ನೌಕರರು ತಮ್ಮ ಸಂಬಳದ ಜೊತೆ ಇದನ್ನೂ ಪಡೆಯಬಹುದು. ಹಾಗೆಯೇ ಖಾಸಗಿ ನೌಕರರಿಗೂ ಇದು ವರದಾನವಾಗಲಿದೆ.