ಸೋಮವಾರದಂದು ನಡೆದ ಐಪಿಎಲ್ ನ ಮೂರನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.
ಮೊದಲು ಬ್ಯಾಟಿಂಗ್ ಮಾಡಿದ ಆರ್.ಸಿ.ಬಿ. ತಂಡಕ್ಕೆ ಆರಂಭ ಆಟಗಾರರಾದ ದೇವದತ್ ಪಡಿಕಲ್ ಹಾಗೂ ಆರೋನ್ ಫಿಂಚ್ ಅವರ ಜೊತೆಯಾಟದಿಂದ ಉತ್ತಮ ಆರಂಭ ದೊರಕಿತು. ದೇವದತ್ ಪಡಿಕಲ್ 42 ಎಸೆತಗಳಲ್ಲಿ(56) ರನ್ ಗಳಿಸಿ ವಿಜಯ್ ಶಂಕರ್ ಗೆ ವಿಕೆಟ್ ಒಪ್ಪಿಸಿದರು. ಆರೋನ್ ಫಿಂಚ್ ಕೂಡ 29ರನ್ ಗಳಿಸಿ ಔಟಾದರು. ನಂತರ ಬ್ಯಾಟಿಂಗ್ ಗಿಳಿದ ನಾಯಕ ವಿರಾಟ್ ಕೊಹ್ಲಿ 14 ರನ್ ಗೆ ಔಟಾದರು. ಎಬಿಡಿ ವಿಲಿಯರ್ಸ್ 30ಎಸೆತಗಳಲ್ಲಿ (51) ಅವರ ಸ್ಫೋಟಕ ಬ್ಯಾಟಿಂಗ್ ಮಾಡಿ ಕೊನೆ ಓವರ್ ನಲ್ಲಿ ರನ್ ಔಟ್ ಆದರು. ಆರ್.ಸಿ.ಬಿ. ತಂಡ 5 ವಿಕೆಟ್ ನಷ್ಟಕ್ಕೆ 163 ರನ್ ಗಳ ಮೊತ್ತ ದಾಖಲಿಸಿತು.
ಗುರಿ ಬೆನ್ನತ್ತಿದ ಸನ್ ರೈಸರ್ಸ್ ಹೈದ್ರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಕೇವಲ 6 ರನ್ ಗಳಿಸಿ ಔಟಾದರು. ನಂತರ ಜಾನಿ ಬೈರ್ ಸ್ಟೋವ್ ಹಾಗೂ ಮನೀಶ್ ಪಾಂಡೆ ಅವರ ಉತ್ತಮ ಜೊತೆಯಾಟದಿಂದ ಸನ್ರೈಸರ್ಸ್ ಹೈದರಾಬಾದ್ ತಂಡ ಚೇತರಿಕೆ ಕಂಡಿತು. ಮನೀಶ್ ಪಾಂಡೆ 34ರನ್ ಗಳಿಸಿ ಔಟಾದರು. ಜಾನಿ ಬೈರ್ ಸ್ಟೋವ್ ಕೂಡ 43 ಎಸೆತಗಳಲ್ಲಿ (61) ರನ್ ಗಳಿಸಿ ಚಾಹಲ್ ಬೌಲಿಂಗ್ ನಲ್ಲಿ ಬೋಲ್ಡ್ ಆದರು. ನಂತರ ಸನ್ರೈಸರ್ಸ್ ಹೈದರಾಬಾದ್ ಸತತವಾಗಿ ವಿಕೆಟ್ ಕಳೆದುಕೊಂಡು 153 ರನ್ ಗಳಿಗೆ ಆಲೌಟ್ ಆಗುವ ಮೂಲಕ ಗುರಿ ತಲುಪವಲ್ಲಿ ವಿಫಲವಾಯಿತು. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 10 ರನ್ ಗಳ ಭರ್ಜರಿ ಜಯ ಸಾಧಿಸಿತು.